ಅಜ್ಮೀರ್ ದರ್ಗಾಕ್ಕೆ ಯಾತ್ರೆ ಹೊರಟಿದ್ದ ವ್ಯಕ್ತಿ ಹೃದಯಾಘಾತಕ್ಕೆ ಬಲಿ

24/07/2025
ಬೆಳ್ತಂಗಡಿ: ಅಜ್ಮೀರ್ ದರ್ಗಾ ಶರೀಫ್ ಗೆ ಯಾತ್ರೆ ಹೊರಟಿದ್ದ ವ್ಯಕ್ತಿಯೊಬ್ಬರು ರೈಲಿನಲ್ಲಿ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಮಂಗಳೂರಿನ ಸುರತ್ಕಲ್ ಬಳಿ ನಡೆದಿದೆ
ಗುರುವಾಯನಕೆರೆ ಶಕ್ತಿನಗರದ ನಿವಾಸಿ ವೃತ್ತಿಯಲ್ಲಿ ಆಟೋ ಚಾಲರಾಗಿರುವ ಇಸ್ಹಾಕ್(37) ಮೃತಪಟ್ಟವರಾಗಿದ್ದಾರೆ. ಇವರು ಸ್ನೇಹಿತರ ಜೊತೆಗೆ ರಾಜಸ್ಥಾನದ ಅಜ್ಮೀರ್ ದರ್ಗಾ ಶರೀಫ್ ಗೆ ಯಾತ್ರೆ ಹೊರಟಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಸುರತ್ಕಲ್ ಗೆ ರೈಲು ತಲುಪುತ್ತಿದ್ದ ವೇಳೆ ಏಕಾಏಕಿ ಇಸ್ಹಾಕ್ ಅವರಿಗೆ ಎದೆ ನೋವು ಕಾಣಿಸಿಕೊಂಡು ಅವರು ಅಸ್ವಸ್ಥರಾಗಿದ್ದರು. ಈ ವೇಳೆ ರೈಲಿನಿಂದ ಇಳಿದು ಸಮೀಪದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಅವರು ಮೃತಪಟ್ಟಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: