ಮಾನಸಿಕ ಅಸ್ವಸ್ಥನನ್ನು ಅಸಹಜ ಲೈಂಗಿಕ ಕ್ರಿಯೆಗೆ ಬಳಸಿಕೊಂಡ ಪ್ರತಿಷ್ಠಿತ ಕುಟುಂಬದ ವ್ಯಕ್ತಿ! | ವಿಡಿಯೋ ವೈರಲ್ - Mahanayaka
12:59 PM Wednesday 20 - August 2025

ಮಾನಸಿಕ ಅಸ್ವಸ್ಥನನ್ನು ಅಸಹಜ ಲೈಂಗಿಕ ಕ್ರಿಯೆಗೆ ಬಳಸಿಕೊಂಡ ಪ್ರತಿಷ್ಠಿತ ಕುಟುಂಬದ ವ್ಯಕ್ತಿ! | ವಿಡಿಯೋ ವೈರಲ್

13/03/2021


Provided by

ರಾಯಚೂರು: ಮಾನಸಿಕ ಅಸ್ವಸ್ಥ, ಮಾತುಬಾರದ ಯುವಕನನ್ನು ವ್ಯಕ್ತಿಯೋರ್ವ ಅಸಜ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದು, ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಘಟನೆ ಬಯಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಸ್ಕಿ ತಾಲೂಕಿನ ಬಸಣ್ಣ ಕ್ಯಾಂಪ್ (ಹಾಲಾಪುರ)ನ ಸೂಗರಡ್ಡಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಯು ಪ್ರತಿಷ್ಠಿತ ಕುಟುಂಬಕ್ಕೆ ಸೇರಿದವನಾಗಿದ್ದಾನೆ ಎಂದು ಹೇಳಲಾಗಿದೆ.

ಫೆ.9ರಂದು ಈ ಘಟನೆ ನಡೆದಿದ್ದು,  ಮಧ್ಯಾಹ್ನ ಸಂಜೆ 4:30ರ ವೇಳೆಗೆ ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 23 ವರ್ಷ ವಯಸ್ಸಿನ ಮಾನಸಿಕ ಅಸ್ವಸ್ಥ ಯುವಕನನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದ ಆರೋಪಿ  ಸೂಗರಡ್ಡಿ, ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ. ಈತನ ಕೃತ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.

ಘಟನೆ ಸಂಬಂಧ ಯುವಕನ ತಂದೆಗೂ ಈ ವಿಡಿಯೋ ತಲುಪಿದ್ದು, ಈ ದೃಶ್ಯ ನೋಡಿ ತೀವ್ರವಾಗಿ ನೊಂದ ಅವರು,  ಮಾರ್ಚ್ 5ರಂದು ಕವಿತಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೃತ್ಯ ನಡೆಸಿದಾತನಿಗೆ ತಕ್ಕ ಶಿಕ್ಷೆ ವಿಧಿಸುವಂತೆ ದೂರು ನೀಡಿದ್ದಾರೆ.

ಕೃತ್ಯ ನಡೆಸಿದ ಯುವಕ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದವನಾಗಿದ್ದಾನೆ. ಈತನ ಕುಟುಂಬದಲ್ಲಿ ಕೆಲವು ಹಿರಿಯ ಅಧಿಕಾರಿಗಳು ಕೂಡ ಇದ್ದಾರೆ ಎಂದು ತಿಳಿದು ಬಂದಿದೆ. ಹೀಗಿದ್ದೂ ಕೂಡ ಇಂತಹ ಕುಟುಂಬದ ಯುವಕನೋರ್ವ ಈ ರೀತಿಯ ಕೆಲಸ ನಡೆಸಿರುವುದು ಇದೀಗ ಸಮಾಜದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತೀಚಿನ ಸುದ್ದಿ