ರಸ್ತೆ ಮಧ್ಯೆ ಅಪಘಾತ ಕಂಡು ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಎಂತಹ ಕೆಲಸ ಮಾಡಿದ್ದಾರೆ ನೋಡಿ - Mahanayaka

ರಸ್ತೆ ಮಧ್ಯೆ ಅಪಘಾತ ಕಂಡು ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಎಂತಹ ಕೆಲಸ ಮಾಡಿದ್ದಾರೆ ನೋಡಿ

08/01/2021


Provided by

ಬೆಳಗಾವಿ: ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಅವರು ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಲ್ಲದೇ ಅವರ ಚಿಕಿತ್ಸೆಗೆ 10 ಸಾವಿರ ರೂಪಾಯಿಗಳನ್ನು ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹಿರೆಬಾಗೆವಾಡಿ ಬಳಿಯ ರಾಷ್ಟೀಯ ಹೆದ್ದಾರಿ 4 ರಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಅಪಘಾತ ಸಂಭವಿಸಿತ್ತು.  ಈ ವೇಳೆ ಪ್ರಕಾಶ್ ಹುಕ್ಕೇರಿ ಬೆಳಗಾವಿಯಿಂದ ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದರು.

ರಸ್ತೆ ಮಧ್ಯೆ ಅಪಘಾತವನ್ನು ಕಂಡು ಕೂಡಲೆ ಸ್ಥಳೀಯ ಆಸ್ಪತ್ರೆಗೆ ಮಾಹಿತಿ ನೀಡಿ ಆಂಬ್ಯುಲೆನ್ಸ್ ಬರುವಂತೆ ಸೂಚಿಸಿದರು. ಆಂಬುಲೆನ್ಸ್ ಬಂದು ಗಾಯಾಳುವನ್ನು ಕರೆದುಕೊಂಡು ಹೊಗುವವರೆಗೂ ಸ್ಥಳದಲ್ಲೆ ಇದ್ದು. ಅಪಘಾತಕ್ಕೊಳಗಾದ ವ್ಯಕ್ತಿಗೆ ಕೂಡಲೇ ೧೦ ಸಾವಿರ ರೂಪಾಯಿ ನೆರವು ನೀಡಿದರಲ್ಲದೇ,  ಚಿಕಿತ್ಸೆಗೆ ಇನ್ನೂ ಹೆಚ್ಚಿನ ಸಹಾಯ ಬೇಕಾದ್ರೆ ನಮ್ಮ ಆಪ್ತ ಸಹಾಯಕರನ್ನ ಸಂಪರ್ಕಿಸುವಂತೆ ತಿಳಿಸಿದ್ದಾರೆ.

ಅಭಿವೃದ್ಧಿ ವಿಚಾರದಲ್ಲಿ ರಾಜ್ಯದಲ್ಲಿಯೇ ನಂಬರ್ 1 ಎನಿಸಿಕೊಂಡಿರುವ ಪ್ರಕಾಶ್ ಹುಕ್ಕೇರಿ ಅವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರಕಾಶ್ ಹುಕ್ಕೇರಿ ಅವರ ಕೆಲಸವನ್ನು ಶ್ಲಾಘಿಸಿದ್ದಾರೆ.

ಇತ್ತೀಚಿನ ಸುದ್ದಿ