ಮನೆಗೆ ಬೆಂಕಿ ಬಿದ್ದು ಒಂದೇ ಕುಟುಂಬದ  ಐವರ ದಾರುಣ ಸಾವು - Mahanayaka
8:14 AM Wednesday 21 - January 2026

ಮನೆಗೆ ಬೆಂಕಿ ಬಿದ್ದು ಒಂದೇ ಕುಟುಂಬದ  ಐವರ ದಾರುಣ ಸಾವು

15/03/2021

ಕೃಷ್ಣಗಂಜ್‌:  ಮನೆಗೆ ಬೆಂಕಿ ಹತ್ತಿಕೊಂಡ ಪರಿಣಾಮ ಒಂದೇ ಕುಟುಂಬದ ಐವರು ಮೃತಪಟ್ಟ ಘಟನೆ ಬಿಹಾರದ ಕೃಷ್ಣ ಗಂಜ್ ನಲ್ಲಿ ನಡೆದಿದ್ದು,  ಸೋಮವಾರ ಮುಂಜಾನೆ 3 ಗಂಟೆಯ ಸುಮಾರಿಗೆ ಇಲ್ಲಿನ ಸಲಾಂ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

ಬೆಂಕಿ ಅವಘಡದಲ್ಲಿ ನೂರ್ ಆಲಂ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು ಸಾವಿಗೀಡಾಗಿದ್ದು, ಘಟನಾ ಸ್ಥಳಕ್ಕೆ ತಕ್ಷಣ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ ಎಂದು ಉಪವಿಭಾಗದ ಮ್ಯಾಜಿಸ್ಟ್ರೇಟ್ ಶಹನವಾಜ್ ಅಹ್ಮದ್ ನಿಯಾಜಿ ತಿಳಿಸಿದ್ದಾರೆ.

ಮನೆಗೆ ಹೇಗೆ ಬೆಂಕಿ ಬಿದ್ದಿದೆ ಎನ್ನುವ ಬಗ್ಗೆ ಅಧಿಕಾರಿಗಳು ಇನ್ನೂ ಯಾವುದೇ ಮಾಹಿತಿ ನೀಡಿಲ್ಲ.  ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಬಗ್ಗೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ