ಕೊಡಗು: ಮನೆಗೆ ಬೆಂಕಿ ಹಚ್ಚಿದ ಪಾನಮತ್ತ ವ್ಯಕ್ತಿ |  6 ಮಂದಿ ಸಜೀವ ದಹನ - Mahanayaka
10:01 AM Thursday 11 - December 2025

ಕೊಡಗು: ಮನೆಗೆ ಬೆಂಕಿ ಹಚ್ಚಿದ ಪಾನಮತ್ತ ವ್ಯಕ್ತಿ |  6 ಮಂದಿ ಸಜೀವ ದಹನ

kodagu
03/04/2021

ಕೊಡಗು: ವ್ಯಕ್ತಿಯೋರ್ವ ಮನೆಯ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ ಮನೆಗೆ ಬೆಂಕಿ ಹಚ್ಚಿದ್ದು, ಪರಿಣಾಮವಾಗಿ ಮನೆಯೊಳಗಿದ್ದ 6 ಜನರು ಸಜೀವವಾಗಿ ದಹನಗೊಂಡ ಘಟನೆ . ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಕನೂರು ಗ್ರಾಮದಲ್ಲಿ ನಡೆದಿದೆ.

ಕಂಠಮಟ್ಟ ಕುಡಿದು ಬಂದ  ಎರವರ ಭೋಜ ಎಂಬಾತ ಎರವರ ಮಂಜು ಎಂಬವರ ಮನೆಗೆ ಬೆಂಕಿ ಹಚ್ಚಿದ್ದು,  ಹೊರಗಿನಿಂದ ಬಾಗಿಲು ಲಾಕ್ ಮಾಡಿದ್ದರಿಂದ ಮನೆಯೊಳಗಿದ್ದ ಕುಟುಂಬಸ್ಥರು ಮನೆಯಿಂದ ಹೊರ ಬರಲು ಸಾಧ್ಯವಾಗದೇ ಸಜೀವ ದಹನವಾಗಿ ಸಾವನ್ನಪ್ಪಿದ್ದಾರೆ.

ಉತ್ತರಪ್ರದೇಶ ಮಾದರಿಯ ಘಟನೆ ಇದಾಗಿದ್ದು, ಆರೋಪಿಯ ದುಷ್ಟತನಕ್ಕೆ ಒಂದೆರಡಲ್ಲ 6 ಜೀವಗಳು ಬಲಿಯಾಗಿವೆ. ಘಟನೆ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ