ಮನೆಗೆ ನುಗ್ಗಲು ಯತ್ನಿಸಿದ ಬೃಹತ್ ಹಾವನ್ನು ತಡೆದು ಮನೆಗೆ ಕಾವಲು ನಿಂತ ಬೆಕ್ಕು! - Mahanayaka
7:05 PM Wednesday 15 - October 2025

ಮನೆಗೆ ನುಗ್ಗಲು ಯತ್ನಿಸಿದ ಬೃಹತ್ ಹಾವನ್ನು ತಡೆದು ಮನೆಗೆ ಕಾವಲು ನಿಂತ ಬೆಕ್ಕು!

pet cat
22/07/2021

ಭುವನೇಶ್ವರ್: ಮನೆಯೊಳಗೆ ಪ್ರವೇಶಿಸಲು ಬಂದ ಹಾವೊಂದನ್ನು ಬೆಕ್ಕು ಸುಮಾರು ಅರ್ಧ ಗಂಟೆಗಳವರೆಗೆ ತಡೆ ಹಿಡಿದು ಮನೆಯವರಿಗೆ ರಕ್ಷಣೆ ನೀಡಿರುವ ಅಪರೂಪದ ಘಟನೆಯೊಂದು ಒಡಿಶಾದಲ್ಲಿ ನಡೆದಿದೆ.


Provided by

ಬೆಕ್ಕು ತಿಂಡಿ ತಿನ್ನುತ್ತಿದ್ದ ವೇಳೆ ಹಿತ್ತಲಿನ ಬಾಗಿಲಿನ ಬಳಿಯಿಂದ ಹಾವೊಂದು ಮನೆಯೊಳಗೆ ನುಗ್ಗಲು ಯತ್ನಿಸಿದೆ. ಈ ವೇಳೆ ಹಾವನ್ನು ನೋಡಿದ ಬೆಕ್ಕು  ಹಾವಿಗೆ ತಡೆಯೊಡ್ಡಿದೆ. ಬೆಕ್ಕು ಹಾವನ್ನು ತಡೆಯುತ್ತಿದ್ದಂತೆಯೇ ಮನೆಯವರು ಗಮನಿಸಿದ್ದು, ತಕ್ಷಣವೇ  ಹಾವನ್ನು ಹಿಡಿಯುವವರಿಗೆ ಕರೆ ಮಾಡಲಾಗಿದೆ.

ಹಾವು ಹಿಡಿಯುವ ಸಿಬ್ಬಂದಿ ಕರೆ ಮಾಡಿ ಅರ್ಧ ಗಂಟೆಯ ಬಳಿಕ ಬಂದಿದ್ದಾರೆ. ಅಲ್ಲಿಯವರೆಗೂ ಬೆಕ್ಕು ಹಾವನ್ನು ಒಂದಿಂಚೂ ಸರಿಯಲು ಬಿಡದೇ ಮನೆಗೆ ಕಾವಲು ಕಾದಿದೆ ಎಂದು  ಕುಟುಂಬದ ಸದಸ್ಯ ಸಂಪದ್ ಕೆ. ಪರಿಡಾ ಹೇಳಿದ್ದಾರೆ.

ಇನ್ನೂ ಈ ಬೆಕ್ಕಿಗೆ ಒಂದೂವರೆ ವರ್ಷ ವಯಸ್ಸಾಗಿದೆ. ಯಾವಾಗಲೂ ಕುಟುಂಬದ ಸದಸ್ಯರಂತೆಯೇ ವರ್ತಿಸುತ್ತಿರುತ್ತದೆ ಎಂದು ಸಂಪದ್  ಅವರು ಹೇಳಿದ್ದಾರೆ.

ಇನ್ನಷ್ಟು ಸುದ್ದಿಗಳು…

ಆಸ್ಕರ್ ಫರ್ನಾಂಡಿಸ್ ಆರೋಗ್ಯ ಸ್ಥಿತಿ ನೆನೆದು ಗಳಗಳನೇ ಅತ್ತ ಜನಾರ್ದನ ಪೂಜಾರಿ

ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿ ಅದೇ ಬಸ್ ನಡಿಗೆ ಸಿಲುಕಿ ಬಲಿಯಾದಳು | ಹೃದಯ ವಿದ್ರಾವಕ ಘಟನೆ

ಸಿಎಂ ಯಡಿಯೂರಪ್ಪರನ್ನು ಭೇಟಿಯಾದ ಸ್ವಾಮೀಜಿಗಳಿಗೆ ಕವರ್ ಹಂಚಿಕೆ | ಈ ಕವರ್ ನಲ್ಲಿ ಏನಿದೆ?

ಸಿದ್ದಲಿಂಗ ಶ್ರೀಗಳು ನಡೆದಾಡುವ ದೇವರಾಗಬೇಕು, ನಡೆದಾಡುವ ರಾಜಕಾರಣಿಯಾಗಬಾರದು | ಹೆಚ್.ವಿಶ್ವನಾಥ್

ಸೆಲ್ಫಿ ತೆಗೆಯುವ ವೇಳೆ ಭಾರೀ ಆಳದ ಜಲಪಾತಕ್ಕೆ ಬಿದ್ದ ಇನ್ಸ್ ಸ್ಟಾ ಸೆಲೆಬ್ರೆಟಿ

ದೇಶ ಹಾಳು ಮಾಡಿದವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ | ನಾಲಿಗೆ ಹರಿಯಬಿಟ್ಟ ನಾರಾಯಣಾಚಾರ್ಯ!

ಇತ್ತೀಚಿನ ಸುದ್ದಿ