ಮನೆ ಕಟ್ಟಲು ಬಿಡದ ಪಿಡಿಒ: ಹೈಟೆನ್ಶನ್ ಕಂಬವೇರಿ ರೈತ ಆತ್ಮಹತ್ಯೆಗೆ ಯತ್ನ - Mahanayaka
11:44 PM Wednesday 15 - October 2025

ಮನೆ ಕಟ್ಟಲು ಬಿಡದ ಪಿಡಿಒ: ಹೈಟೆನ್ಶನ್ ಕಂಬವೇರಿ ರೈತ ಆತ್ಮಹತ್ಯೆಗೆ ಯತ್ನ

gubbi news
22/01/2022

ತುಮಕೂರು: ಮನೆ ಹಾಗೂ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ರೈತನೋರ್ವ ಹೈಟೆನ್ಶನ್ ಕಂಬವೇರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರಿನ ಗುಬ್ಬಿಯಲ್ಲಿ ನಡೆದಿದೆ.


Provided by

ಗ್ರಾಮದ ರೈತ ಶ್ರೀನಿವಾಸ್​ ಎಂಬುವವರು ಸರ್ಕಾರಿ ಜಾಗದಲ್ಲಿ ಮನೆ ಕಟ್ಟಲು ಮುಂದಾಗಿದ್ದರು. ಆದರೆ, ಪಿಡಿಒ ಮನೆ ಕಟ್ಟಲು ಬಿಡದೇ, ಬೆದರಿಕೆ ಹಾಕಿ ಸ್ಥಳದಲ್ಲಿದ್ದ ಮನೆಯ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಿದ್ದಾರೆನ್ನಲಾಗಿದೆ.

ಇದಲ್ಲದೇ ಈ ಪ್ರದೇಶದಲ್ಲಿ ಬೇರೆಯವರಿಗೆ ಮನೆ ನಿರ್ಮಾಣ ಮಾಡಲು ಅವಕಾಶ ಕೊಡಲಾಗಿದೆ. ತನಗೆ ಮಾತ್ರವೇ ಮನೆ ನಿರ್ಮಾಣಕ್ಕೆ ಅವಕಾಶ ಕೊಡುತ್ತಿಲ್ಲ ಎಂದು ರೈತ ದೂರಿದ್ದು, ಹೈಟೆನ್ಶನ್ ಕಂಬವೇರಿ ಕುಳಿತಿದ್ದಾನೆ.

ಈ ವೇಳೆ ತಡವಾಗಿ ಬಂದ ಅಧಿಕಾರಿಗಳು ಕೊನೆಗೂ ರೈತನ ಮನವೊಲಿಸಿದ್ದು, ಬಳಿಕ ಸಮಸ್ಯೆ ಬಗೆ ಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪೊಲೀಸ್ ಮಾಹಿತಿದಾರನನ್ನು ಕೊಂದು, ಮೂರು ವಾಹನಕ್ಕೆ ಬೆಂಕಿಯಿಟ್ಟ ನಕ್ಸಲರು!

ಹಸುವನ್ನು ಮೇಯಿಸಲು ಹೋಗಿದ್ದ ವೃದ್ಧ ಹುಲಿ ದಾಳಿಗೆ ಬಲಿ!

ಹಾಲು, ನೀರು, ವಿದ್ಯುತ್ ದರ ಏರಿಕೆ ಬಗ್ಗೆ ಸಿಎಂ ಬೊಮ್ಮಾಯಿ ಮಹತ್ವದ ಹೇಳಿಕೆ

ಮಹಿಳೆಯರ ಏಷ್ಯಾಕಪ್​ ಹಾಕಿ ಟೂರ್ನಿ: ಮಲೇಷ್ಯಾ ವಿರುದ್ಧ ಭಾರತ ತಂಡಕ್ಕೆ ಭರ್ಜರಿ ಗೆಲುವು

ವಿದ್ಯುತ್ ದರ ಹೆಚ್ಚಳ ಮಾಡುವುದು ಅನಿವಾರ್ಯ: ಸಚಿವ ವಿ.ಸುನಿಲ್ ಕುಮಾರ್

ಇತ್ತೀಚಿನ ಸುದ್ದಿ