ಆಸ್ತಿ ಪಡೆದು ಮನೆಯಿಂದ ಹೊರ ಹಾಕಿದ ಮಕ್ಕಳಿಗೆ ತಕ್ಕ ಪಾಠ ಕಲಿಸಿದ ತಂದೆ! - Mahanayaka
10:02 PM Saturday 13 - December 2025

ಆಸ್ತಿ ಪಡೆದು ಮನೆಯಿಂದ ಹೊರ ಹಾಕಿದ ಮಕ್ಕಳಿಗೆ ತಕ್ಕ ಪಾಠ ಕಲಿಸಿದ ತಂದೆ!

10/02/2021

ಕೊಪ್ಪಳ: ತಂದೆ ಆಸ್ತಿ ನೀಡುವವರೆಗೆ ಸುಮ್ಮನಿದ್ದ ಮಕ್ಕಳು, ಆಸಿ ನೀಡಿದ ಬಳಿಕ ಮನೆಯಿಂದ ಹೊರ ಹಾಕಿದ್ದಾರೆ. ಮಕ್ಕಳಿಗೆ ತಕ್ಕ ಪಾಠ ಕಲಿಸಬೇಕು ಎಂದು ನಿರ್ಧರಿಸಿದ ತಂದೆ, ತಮ್ಮ ಸ್ವಾರ್ಥಿ ಮಕ್ಕಳಿಗೆ ಕಾನೂನಿನ ಏಟು ನೀಡಿದ್ದು, ಇದೀಗ ನೀಡಿದ ಆಸ್ತಿಯನ್ನು ಮತ್ತೆ ಪಡೆದುಕೊಳ್ಳುವ ಮೂಲಕ ಮಕ್ಕಳಿಗೆ ತಿರುಗೇಟು ನೀಡಿದ್ದಾರೆ.

ಕೊಪ್ಪಳ ಲೇಬಗೇರಿ ನಿವಾಸಿ ನಿಂಗಪ್ಪ ಅವರು ಕಲಾವಿದರಾಗಿದ್ದು, ಅವರಿಗೆ 2000 ರೂ.  ಪಿಂಚಣಿ ಬರುತ್ತಿದ್ದು, ಆ ಹಣದಲ್ಲಿಯೇ ಅವರು ಜೀವಿಸುತ್ತಿದ್ದರು. ಕೊನೆಯ ಕಾಲದಲ್ಲಿ ಮಕ್ಕಳು ನೋಡಿಕೊಳ್ಳುತ್ತಾರೆ ಎನ್ನುವ ನಂಬಿಕೆಯಿಂದ ತಮ್ಮ  4.37 ಎಕರೆ ಜಮೀನನ್ನು ಮಕ್ಕಳಿಗೆ ನೀಡಿದರು.

ಈ ಜಮೀನು ಅನುಭವಿಸುತ್ತಿದ್ದ ಮಕ್ಕಳು ಬೇರೆಯವರಿಗೆ ಸಾಗುವಳಿಗೆ ನೀಡಿದ್ದು ಅದರಿಂದ ಬಂದ ಆದಾಯವನ್ನು ಅವರೇ ತೆಗೆದುಕೊಳ್ಳುತ್ತಿದ್ದರು. ಆಸ್ತಿ ಕೈಗೆ ಬಂದ ಬಳಿಕ ಲಿಂಗಪ್ಪ ಅವರನ್ನು ನಿರ್ಲಕ್ಷಿಸಿದರು. ಒಂದು ದಿನ ಮನೆಯಿಂದಲೇ ಹೊರದಬ್ಬಿದರು.

ಮಕ್ಕಳ ಈ ಕೃತ್ಯದಿಂದ ನೊಂದ ಲಿಂಗಪ್ಪ ಅವರು ಎಸಿ ಕೋರ್ಟ್ ಮೆಟ್ಟಿಲೇರಿದರು. ಹಿರಿಯ ನಾಯಕರಿಕರ ರಕ್ಷಣಾ ಕಾಯ್ದೆ ಅನ್ವಯ ಕೋರ್ಟ್ ಲಿಂಗಪ್ಪನವರಿಗೆ ಆಸ್ತಿಯನ್ನು ವಾಪಸ್ ಮಾಡಿದೆ. ಇದಲ್ಲದೇ ತಂದೆಗೆ ತಿಂಗಳಿಗೆ 8 ಸಾವಿರ ರೂಪಾಯಿಗಳನ್ನು ಮಕ್ಕಳು ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ.

ತಮ್ಮ ಜಾಮೀನನ್ನು ವಾಪಸ್ ಪಡೆದುಕೊಂಡಿರುವ ಲಿಂಗಪ್ಪ ಅವರು ತಮ್ಮನ್ನು ಅಂತ್ಯಕಾಲದವರೆಗೆ ನೋಡಿಕೊಳ್ಳುವ ಮಕ್ಕಳ ಹೆಸರಿಗೆ ಜಮೀನು ಕೊಡುವುದಾಗಿ ಹೇಳಿದ್ದಾರೆ.

ಇತ್ತೀಚಿನ ಸುದ್ದಿ