ಮಂಗಳಮುಖಿಯ ಮೇಲೆ ನಾಲ್ವರ ತಂಡದಿಂದ ಕಲ್ಲು ಮತ್ತು ಪೈಪ್ ನಿಂದ ಹಲ್ಲೆ - Mahanayaka

ಮಂಗಳಮುಖಿಯ ಮೇಲೆ ನಾಲ್ವರ ತಂಡದಿಂದ ಕಲ್ಲು ಮತ್ತು ಪೈಪ್ ನಿಂದ ಹಲ್ಲೆ

crime
02/05/2023


Provided by

ಮಂಗಳೂರು: ಮಂಗಳಮುಖಿಯೊಬ್ಬರಿಗೆ ನಾಲ್ಕು ಮಂದಿ ಹಲ್ಲೆ ನಡೆಸಿದ ಘಟನೆ ಮಂಗಳೂರು ನಗರದ ಕುಂಟಿಕಾನ‌ ಬಳಿ ನಡೆದಿದೆ.

ಮಂಗಳಮುಖಿಯ ಬಳಿ ಬಂದ ನಾಲ್ಕು ಮಂದಿ ಯುವಕರು ವ್ಯವಹಾರ ಕುದುರಿಸಿದ ಬಳಿಕ ‘ನಿನಗೆ ಅಷ್ಟು ದುಡ್ಡು ಯಾಕೆ ಕೋಡಬೇಕು? ಎಂದು ಕೇಳಿ ಅವಾಚ್ಯ ಶಬ್ದದಿಂದ ಬೈದಿರುವುದಲ್ಲದೆ, ಒಬ್ಬ ಕಲ್ಲಿ ನಿಂದ ತಲೆಗೆ, ಇನ್ನೊಬ್ಬ ಪೈಪ್‌ನಿಂದ ಬೆನ್ನಿಗೆ ಹೊಡೆದು ಮತ್ತಿಬ್ಬರು ಕಲ್ಲು ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂದರ್ಭ ಮಂಗಳಮುಖಿಯ ಬ್ಯಾಗ್ ನೆಲಕ್ಕೆ ಬಿದ್ದಿದ್ದು, ಅದನ್ನು ಹೆಕ್ಕಿ ಪರಿಶೀಲಿಸಿದಾಗ 6000 ರೂ. ಕಳವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಯುವಕರು ಹಲ್ಲೆ ನಡೆಸಿದ್ದರಿಂದ ಮಂಗಳಮುಖಿಗೆ ಗಾಯ ವಾಗಿದ್ದು, ಮಾಹಿತಿ ತಿಳಿದ ಇನ್ನೋರ್ವ ಮಂಗಳಮುಖಿಯು ಗಾಯ ಗೊಂಡ ಮಂಗಳಮುಖಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ