ಮಂಗಳೂರು: ‘ವಿಶ್ವ ಹಿರಿಯರ ನಿಂದನೆ ಕುರಿತು ಜಾಗೃತಿ’ ಕಾರ್ಯಕ್ರಮ

ಜೂನ್ 28, 2023 ರಂದು ರಾಷ್ಟ್ರೀಯ ಹಿರಿಯನಾಗರಿಕರ ಸಹಾಯವಾಣಿ ದಕ್ಷಿಣ ಕನ್ನಡ ಜಿಲ್ಲೆಯ ಕ್ಷೇತ್ರ ನಿರ್ವಹಣಾ ಅಧಿಕಾರಿ (FRO) ಅವರು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿ, ಕೊಣಾಜೆ — ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸ ಸಭಾಂಗಣದಲ್ಲಿ ‘ವಿಶ್ವ ಹಿರಿಯರ ನಿಂದನೆ ಕುರಿತು ಜಾಗೃತಿ’ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಪ್ರೊ.ಪಿ.ಎಲ್.ಧರ್ಮ ರಾಜ್ಯಶಾಸ್ತ್ರ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ ಇವರು ಅತಿಥಿಗಳಿಗೆ ಹೂವುಗಳನ್ನು ನೀಡುವುದರೊಂದಿಗೆ ಸ್ವಾಗತಿಸಿದರು. ಈ ವಿಶೇಷ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಉಪಕುಲಪತಿ ಪ್ರೊ.ಜಯರಾಜ್ ಅಮೀನ್ ಅವರು ಹಿರಿಯ ನಾಗರಿಕರಿಗಾಗಿ ರಾಷ್ಟ್ರೀಯ ಸಹಾಯವಾಣಿ-14567 ರ ಕರಪತ್ರವನ್ನು ಬಿಡುಗಡೆ ಮಾಡಿದರು.
ನಂತರ ರಾಷ್ಟೀಯ ಹಿರಿಯನಾಗರೀಕರರ ಸಹಾಯವಾಣಿ (NHSC – 14567) ಕ್ಷೇತ್ರ ನಿರ್ವಹಣಾ ಅಧಿಕಾರಿ ದಿವ್ಯ ವೈ.ಜಿ. ಅವರು ಕೆ. ಬಿ.ಎಂ. ಪಟೇಲ್ ಗೌರವಾನ್ವಿತ ಹಿರಿಯ ಜಿಲ್ಲಾ ನ್ಯಾಯಾಧೀಶರು, ಜಿಲ್ಲಾ ಕಾನೂನು ಕೋಶ, ಡಿ.ಸಿ. ಕಚೇರಿ, ಮಂಗಳೂರು ಅವರನ್ನು ಪರಿಚಯಿಸಿದರು.
ನಂತರ ಮಾತನಾಡಿದ ಅವರು, ಕೇಸ್ ಸ್ಟಡೀಸ್ ಉದಾಹರಣೆಗಳನ್ನು ನೀಡುವ ಮೂಲಕ ನಿರ್ವಹಣೆ ಕಾಯಿದೆ – 2007 ರ ಪ್ರಾಮುಖ್ಯತೆಯನ್ನು ವಿವರಿಸಿದರು. ನಂತರ ಎಸಿ ಮತ್ತು ಡಿಸಿ ಟ್ರಿಬ್ಯೂನಲ್ ಹೊಂದಿರುವ ಅಧಿಕಾರಗಳು ಮತ್ತು ಜಿಲ್ಲಾ ಕಾನೂನು ಕೋಶದ ನಡುವಿನ ಸಂಪರ್ಕಗಳ ಬಗ್ಗೆ ವಿವರಿಸಿದರು.
ಸಮಾರಂಭದಲ್ಲಿ ಮಂಗಳೂರು ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಕೆ.ಎನ್.ಶಶಿಧರ್ ಉಪಸ್ಥಿತರಿದ್ದು, ಹಿರಿಯ ನಾಗರಿಕರ ದೌರ್ಜನ್ಯದ ಅರಿವು ಮತ್ತು ರಕ್ಷಣೆ ಕುರಿತು ವಿಚಾರದ ಕುರಿತು ಮಾತನಾಡಿದರು.
ಹಿರಿಯ ನಾಗರಿಕರ ಸಂಘದ ಉಪಾಧ್ಯಕ್ಷ ರಮೇಶ್ ರಾವ್ ಮಾತನಾಡಿ, ಇಂದಿನ ದಿನಗಳಲ್ಲಿ ವೃದ್ಧಾಶ್ರಮಗಳು ಹೇಗೆ ಪ್ರಚಲಿತದಲ್ಲಿವೆ ಮತ್ತು ಯುವ ಪೀಳಿಗೆಗೆ ಹೇಗೆ ತಳಮಟ್ಟದಿಂದ ಕುಟುಂಬದ ಮಹತ್ವ ಅರಿಯಬೇಕು ಎಂದು ತಿಳಿಸಿದರು ಮತ್ತು ಗೌರವದಿಂದ ನಡೆಸಿಕೊಳ್ಳಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು.
ಪ್ರೊ.ಪಿ.ಎಲ್.ಧರ್ಮ ಅವರು ಹಿರಿಯ ನಾಗರಿಕನ್ನು ಗೌರವಿಸುವ ಹಾಗೂ ಶೋಷಣೆ ಮತ್ತು ನಿಂದನೆಯನ್ನು ತಡೆಯುವ ಸಲುವಾಗಿ ಪ್ರತಿಜ್ಞೆಯನ್ನು ಬೋಧಿಸಿದರು.
ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಗಳಲ್ಲಿ ಇದೆ ತಿಂಗಳನಲ್ಲಿ ನಡೆದ ಚಿತ್ರಕಲಾ ಸ್ಪರ್ಧೆ, ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಗಣ್ಯರಿಗೆ ಹೂವಿನ ಕುಂಡಗಳನ್ನು ನೀಡಿ ಗೌರವಿಸಲಾಯಿತು.
ವಿಶ್ವವಿದ್ಯಾನಿಲಯ ಕೊಣಾಜೆ ಇದರ ಉಪಕುಲಪತಿಗಳಾದ ಪ್ರೊ.ಜಯರಾಜ್ ಅಮೀನ್ ಮಾತನಾಡಿ, ಹಿರಿಯರನ್ನು ಹೇಗೆ ಕಾಳಜಿ ವಹಿಸಬೇಕು ಮತ್ತು ಇಂದಿನ ಪರಿಸ್ಥಿತಿಯಲ್ಲಿ ಹಿರಿಯರನ್ನು ಕುರಿತಂತೆ ಈ ಜಾಗೃತಿ ಕಾರ್ಯಕ್ರಮವು ಜರುಗುತ್ತಿರುವುದು ಮಕ್ಕಳ ಕಲಿಯ ಹಂತದಿಂದಲೇ ಅವರಿಗೆ ಅರಿವು ಮೂಡಿಸಿದಂತಾಗುವುದು ಹಾಗೂ ನೈತಿಕ ಶಿಕ್ಷಣದ ಅಗತ್ಯದ ಕುರಿತು ತಿಳಿಸಿದರಲ್ಲದೇ ಕಾನೂನಾತ್ಮಕ ಜ್ಞಾನವೂ ಅಷ್ಟೇ ಮುಖ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಡಾ.ದಯಾನಂದ ನಾಯ್ಕ್ ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ರಾಷ್ಟೀಯ ಹಿರಿಯನಾಗರಿಕರ ಸಹಾಯವಾಣಿ – 14567 ಇದರ ಕ್ಷೇತ್ರ ನಿರ್ವಹಣಾ ಅಧಿಕಾರಿ ದಿವ್ಯ ವೈ. ಜಿ ಕಾರ್ಯಕ್ರಮವನ್ನು ನಿರೂಪಿಸಿದರು.
ಜಿಲ್ಲಾ ಕಾನೂನು ಕೋಶ ಡಿಸಿ ಕಚೇರಿ ಹಿರಿಯ ಜಿಲ್ಲಾ ನ್ಯಾಯಾಧೀಶ ಕೆ. ಬಿ.ಎಂ.ಪಟೇಲ್ , ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆ ಉಪಕುಲಪತಿಗಳು ಪ್ರೊ.ಜಯರಾಜ್ ಅಮೀನ್, ಮಂಗಳೂರು ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಕೆ.ಎನ್.ಶಶಿಧರ್, ಹಿರಿಯ ನಾಗರಿಕರ ಸಂಘದ ಉಪಾಧ್ಯಕ್ಷ ರಮೇಶ್ ರಾವ್, ರಾಷ್ಟೀಯ ಹಿರಿಯನಾಗರಿಕರ ಸಹಾಯವಾಣಿ ಕ್ಷೇತ್ರ ನಿರ್ವಹಣಾ ಅಧಿಕಾರಿ ದಿವ್ಯ ವೈ. ಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw