ಮಂಗಳೂರಿನಲ್ಲಿ ಉದ್ಯೋಗ ಮೇಳ: 2,500 ಉದ್ಯೋಗಾವಕಾಶಗಳು - Mahanayaka
5:43 PM Wednesday 15 - October 2025

ಮಂಗಳೂರಿನಲ್ಲಿ ಉದ್ಯೋಗ ಮೇಳ: 2,500 ಉದ್ಯೋಗಾವಕಾಶಗಳು

udyogamela
15/10/2022

ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನಲ್ಲಿ ಅಕ್ಟೋಬರ್ 18 ರಂದು ಉದ್ಯೋಗ ಮೇಳವನ್ನು ಬೆಳಗ್ಗೆ 9 ರಿಂದ ಸಂಜೆ 3:30 ರ ವರೆಗೆ ಆಯೋಜಿಸಲಾಗಿದೆ.


Provided by

ಸ್ಪೆಕ್ಟ್ರಂ ಇಂಡಸ್ಟ್ರಿಯ ಮುಖ್ಯ ವ್ಯವಸ್ಥಾಪಕ ಹಾಗೂ ಕಾನ್ಪೇಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿಯ ಮಾಜಿ ಅಧ್ಯಕ್ಷ ಜೀವನ್ ಸಲ್ದಾನ ಉದ್ಯೋಗ ಮೇಳವನ್ನು ಉದ್ಘಾಟಿಸಲಿದ್ದಾರೆ.

ಈ ಉದ್ಯೋಗ‌ ಮೇಳದಲ್ಲಿ ಮಂಗಳೂರು, ಬೆಂಗಳೂರು, ಮುಂಬೈ, ಗೋವಾ ಹಾಗೂ ಕೇರಳದ ಐಟಿ, ಬಿಪಿಒ, ಇನ್ಸೂರೆನ್ಸ್ ಬ್ಯಾಂಕಿಂಗ್, ಆರೋಗ್ಯ, ಹೊಟೇಲ್, ಆಟೊಮೊಬೈಲ್, ಕ್ರೂಸ್, ಶಿಕ್ಷಣ, ಟೆಲಿಕಮ್ಯುನಿಕೇಷನ್, ಸೇಲ್ಸ್ ಮತ್ತು ರಿಟೈಲ್‌ ನಂತಹ 60 ಕಂಪೆನಿಗಳು ಸುಮಾರು 2500 ಉದ್ಯೋಗವಕಾಶಗಳನ್ನು ಒದಗಿಸಲಿವೆ. ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್, ಐಟಿಐ, ಡಿಪ್ಲೋಮಾ, ಕ್ರೂಸ್, ಹೊಟೇಲ್ ಮ್ಯಾನೆಜ್‌ಮೆಂಟ್‌ ಅಭ್ಯರ್ಥಿಗಳು ಹಾಗೂ ಅಂತಿಮ ವರ್ಷದಲ್ಲಿ ವ್ಯಾಸಂಗ ಪ್ರಯೋಜನವನ್ನು ಮಾಡುತ್ತಿರುವ ವಿದ್ಯಾರ್ಥಿಗಳು ಉದ್ಯೋಗಮೇಳದ ಪಡೆದುಕೊಳ್ಳಬಹುದು.

ಯಾವುದೇ ನೋಂದಣಿ ಶುಲ್ಕವಿಲ್ಲದೆ ಭಾಗವಹಿಸಲು ಅವಕಾಶವಿದ್ದು, ಅಭ್ಯರ್ಥಿಗಳು ಸ್ವವಿವರದ ಅನೇಕ ಪ್ರತಿಗಳು ಮತ್ತು ಸೂಕ್ತ ದಾಖಲೆಗಳೊಂದಿಗೆ ಹಾಜರಾಗತಕ್ಕದ್ದು ಎಂದು ಮಿಲಾಗ್ರಿಸ್ ಕಾಲೇಜಿನ ಪ್ರಕಟಣೆ ತಿಳಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ