ಮಂಗಳೂರಿನಲ್ಲಿ ಎಲ್ಲಿ ನೋಡಿದ್ರೂ ಹುಲಿಗಳದ್ದೇ ಸದ್ದು!
ಮಂಗಳೂರು: ದಸರಾ ಬಂತು ಅಂದ್ರೆ ಕರಾವಳಿಯಲ್ಲಿ ಎಲ್ಲಿ ನೋಡಿದ್ರೂ ಹುಲಿಗಳದ್ದೇ ಸದ್ದು… ಅದು ಅಂತಿತಹ ಹುಲಿಗಳಲ್ಲ. ಒಂದಕ್ಕಿಂತ ಒಂದು ಮೀರಿಸುವ ಹುಲಿಗಳು. ಆದ್ರೆ ಇವತ್ತು ಆ ಎಲ್ಲಾ ಹುಲಿಗಳು ಒಂದೇ ಕಡೆ ಸೇರುವ ಮೂಲಕ ಜನರಿಗೆ ಸಕತ್ ಮನರಂಜೆ ನೀಡಿತ್ತು. ಏನಿದು ಹುಲಿಗಳು ಅಂತೀರಾ ಹಾಗಿದ್ರೆ ಏನು ಅಂತ ನೀವೇ ನೋಡಿ….
ಜಗಮಗಿಸುವ ಲೈಟ್’ಗಳು…. ನಡುವಿನಲ್ಲಿ ಇರೋ ರಿಂಗ್ … ರಿಂಗ್ ಮೇಲೆ ತಾಳಕ್ಕೆ ಲಯಬದ್ಧವಾಗಿ ನಲಿತಾ ಇರೋ ಹುಲಿಗಳು. ಹೌದು ಇದು ಮಂಗಳೂರಿನಲ್ಲಿ ದಸರಾ ಪ್ರಯುಕ್ತ ನಡೀತಾ ಇರೋ ಪಿಲಿ ಪರ್ಬದ ದೃಶ್ಯಗಳು. ಪಿಲಿ ಪರ್ಬ ಅಂದ್ರೆ ಹುಲಿಗಳ ಹಬ್ಬ ಇಂದು ಮಂಗಳೂರಿನ ಜನರಿಗೆ ಮೈ ರೋಮಾಂಚನಗೊಳಿಸುವ ಅನುಭವ ನೀಡಿತ್ತು. ಕುಡ್ಲಾ ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಈ ಕಾರ್ಯಕ್ರಮ ಆಯೋಜನೆ ಮಾಡಿದ್ರು. ಹುಲಿ ಕುಣಿತ ಕರಾವಳಿಯ ಜಾನಪದ ಹಾಗೂ ಸಾಂಪ್ರದಾಯಿಕ ಕುಣಿತವಾಗಿದ್ದು ಇದು ಈಗ ವಿಶ್ವದ ಗಮನ ಸೆಳಿತಾ ಇದೆ. ಹುಲಿ ವೇಷದ ಬ್ಯಾಂಡ್ ದೇಶ ವಿದೇಶದಲ್ಲೂ ಫೇಮಸ್ ಆಗಿದ್ದು ಮದುವೆ ಇರಲಿ ಪಾರ್ಟಿ ಇರಲಿ ಎಲ್ಲಾ ಕಡೆಯಲ್ಲೂ ಬಳಕೆಯಾಗ್ತಾ ಇದೆ. ಇದನ್ನು ಇನ್ನಷ್ಟು ಹೆಚ್ಚು ಪ್ರಸಿದ್ಧಿಗೆ ತರಲು ಹಾಗೂ ಜಿಲ್ಲೆಯ ಕಲಾವಿಧರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದ ಈ ಪಿಲಿ ಪರ್ಬವನ್ನು ಆಯೋಜಿಸಿದ್ದಾರೆ.
ಪಿಲಿ ಬರ್ಬದಲ್ಲಿ ಹುಲಿಗಳ ಅಬ್ಬರ
ಕರಾವಳಿಯಲ್ಲಿ ಹುಲಿ ಕುಣಿತದಲ್ಲಿ ಹಲವು ಪ್ರಕಾರಗಳಿದ್ದು ಅದು ಪ್ರದೇಶದಿಂದ ಪ್ರದೇಶಕ್ಕೆ ವಿಬಿನ್ನವಾಗಿದೆ. ಆದ್ರೆ ಮಂಗಳೂರಿನ ಹುಲಿ ತಂಡಗಳು ಕುಣಿತದ ಜೊತೆ ಮಾಡುವ ಸಾಹಸಗಳು ಮೈ ರೋಮಾಂಚನಗೊಳಿಸುತ್ತದೆ. ಇನ್ನು ಹುಲಿ ಬ್ಯಾಂಡ್ ಗೆ ಎಂತಹವರೂ ಕೂಡಾ ಎದ್ದು ನಲಿಯಲು ಮುಂದಾಗ್ತಾರೆ ಅನ್ನೋದಕ್ಕೆ ಇದೇ ವೇದಿಕೆಯಲ್ಲಿ ಪುಟಾಣಿ ಮಕ್ಕಳು ಹಾಕಿದ ಸ್ಟೆಪ್’ಗಳೇ ಸಾಕ್ಷಿ. ಇನ್ನು ಇಲ್ಲಿ ಆಯೋಜನೆ ಮಾಡಿರೋದು ಕೇವಲ ಕುಣಿತ ಮಾತ್ರವಾಗಿರದೆ, ಇದೊಂದು ಸ್ಪರ್ಧೆಯಾಗಿತ್ತು. ಸುಮಾರು ಹನ್ನೆರಡು ತಂಡಗಳು ಭಾಗವಹಿಸಿರೋ ಈ ಕಾರ್ಯಕ್ರಮದಲ್ಲಿ ಗೆಲ್ಲುವ ತಂಡಕ್ಕೆ ಐದು ಲಕ್ಷ ಬಹುಮಾನವನ್ನೂ ನೀಡಲಾಗುತ್ತದೆ. ಭಾಗವಹಿಸುವ ಪ್ರತಿ ತಂಡಕ್ಕೂ 50 ಸಾವಿರ ರೂಪಾಯಿ ಪ್ರೋತ್ಸಾಹ ಧನವನ್ನೂ ನೀಡಲಾಗುತ್ತದೆ. ಇದಲ್ಲದೆ ವ್ಯಯಕ್ತಿಕ ಬಹುಮಾನಗಳೂ ಇದ್ದು ಗೆಲ್ಲುವ ತಂಡಕ್ಕೆ ರಾಜ್ಯ ಸರ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶಕ್ಕೂ ಪ್ರಯತ್ನಿಸಲಾಗುತ್ತದೆ ಎಂದು ಭರವಸೆ ನೀಡಲಾಗಿದೆ.
ಗಮನ ಸೆಳೆದ ಪಿಲಿ ಪರ್ಬ ಕಾರ್ಯಕ್ರಮದ ದ್ವಾರ
ದಸರಾದಲ್ಲಿ ಹುಲಿವೇಷ ಹಾಕಿ ನಲಿಯೋದು ಕರಾವಳಿ ಜಿಲ್ಲೆಯಲ್ಲಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇತ್ತೀಚಿನ ದಿನಗಳಲ್ಲಿ ಬಣ್ಣ ಹಾಗೂ ಬ್ಯಾಂಡ್ಗಳು ದುಭಾರಿಯಾದ ಕಾರಣ ಕೆಲವೊಂದು ತಂಡಗಳು ಹುಲಿ ವೇಷ ಹಾಕೋದನ್ನೇ ನಿಲ್ಲಿಸಿದೆ. ಹೀಗಾಗಿ ಇದು ನಿಲ್ಲಬಾರದು ಅನ್ನೋ ಕಾರಣಕ್ಕೆ ಕುಡ್ಲಾ ಸಾಂಸ್ಕೃತಿಕ ಪ್ರತಿಷ್ಠಾನ ಅನ್ನೋ ಸಂಸ್ಥೆಯ ಮೂಲಕ ಈ ಸ್ಪರ್ಧೆ ಏರ್ಪಡಿಸಿರುವುದು ಕಲಾವಿಧರಿಗೆ ಖುಷಿ ನೀಡಿರುವುದು ಸುಳ್ಳಲ್ಲ.
ಹುಲಿ ಪರ್ಬದ ಕುರಿತು ಶಾಸಕ ವೇದವ್ಯಾಸ್ ಕಾಮತ್ ಮಾತುಗಳು
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka




























