ಅನೈತಿಕ ಪೊಲೀಸ್‌ ಗಿರಿಯಲ್ಲಿ ತೊಡಗುವವರಿಗೆ ಕಾನೂನಿನ ನೈಜ ಮುಖ ತೋರಿಸುತ್ತೇವೆ: ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ - Mahanayaka

ಅನೈತಿಕ ಪೊಲೀಸ್‌ ಗಿರಿಯಲ್ಲಿ ತೊಡಗುವವರಿಗೆ ಕಾನೂನಿನ ನೈಜ ಮುಖ ತೋರಿಸುತ್ತೇವೆ: ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್

anupam agarwal
08/09/2023


Provided by

ಕರ್ನಾಟಕ ಪೊಲೀಸರಿಗೆ ಸವಾಲಾಗಿರುವು‍ದು ಅನೈತಿಕ ಪೊಲೀಸ್‌ಗಿರಿ. ಮಂಗಳೂರು ಭಾಗದಲ್ಲಿ ಸಮಸ್ಯೆ ಹೆಚ್ಚಿರುವ ಬಗ್ಗೆ ಅರಿವಿದೆ. ಪೊಲೀಸರು ಈಗಾಗಲೇ ಈ ಬಗ್ಗೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಅನೈತಿಕ ಪೊಲೀಸ್‌ ಗಿರಿಯಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮಗಳ ಮೂಲಕ ಕಾನೂನಿನ ನೈಜ ಮುಖವನ್ನು ತೋರಿಸಲಿದ್ದೇವೆ ಎಂದು ಮಂಗಳೂರು ನಗರದ ನೂತನ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದ್ದಾರೆ.

ಅವರು ಮಂಗಳೂರು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು. ಮತೀಯ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ವಹಿಸಲಿದ್ದೇವೆ ಎಂದರು.

ಅನೈತಿಕ ಪೊಲೀಸ್‌ ಗಿರಿ ಕೃತ್ಯಗಳಿಗೆ ಯಾರು ಮುಂದಾಗುತ್ತಾರೆ ಮತ್ತು ಅವರಿಗೆ ಬೆನ್ನ ಹಿಂದೆಯಿಂದ ಯಾರೂ ಬೆಂಬಲ ನೀಡುತ್ತಾರೆಯೋ ಅವರ ಬಗ್ಗೆ ತುರ್ತಾಗಿ ಕಾನೂನಿನಡಿ ಕೈಗೊಳ್ಳಬಹುದಾದ ಕ್ರಮಗಳನ್ನು ವಹಿಸಲಾಗುವುದು ಎಂದು ಅವರು ತಿಳಿಸಿದರು.

ಸಾಮಾನ್ಯವಾಗಿ ಇಂತಹ ಕೃತ್ಯಗಳು ನಡೆದಾಗ ತಡವಾಗಿ ಕ್ರಮ ವಹಿಸಲು ಮುಂದಾದಾಗ ಅವರಿಗೆ ಪ್ರೋತ್ಸಾಹ ದೊರಕಿದಂತಾಗುತ್ತದೆ. ಅದಕ್ಕೆ ಅವಕಾಶ ನೀಡದೆ ಕ್ರಮ ವಹಿಸಲಾಗುವುದು. ರಾಜ್ಯದಲ್ಲಿಯೇ ಮಂಗಳೂರು ಅತ್ಯಂತ ಮಹತ್ವ ಹಾಗೂ ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿದೆ. ಹಾಗಾಗಿ ಇಲ್ಲಿ ಕೆಲಸಮಾಡುವಾಗ ನಮ್ಮ ಹೆಚ್ಚುವರಿ ಪ್ರಯತ್ನವನ್ನು ಹಾಕಬೇಕಾಗುತ್ತದೆ. ನನಗೆ ಈಗ ಇಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಬೀಟ್ ವ್ಯವಸ್ಥೆಯೊಂದಿಗೆ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲಾಗುವುದು ಅಂದರು.

ಇತ್ತೀಚಿನ ಸುದ್ದಿ