ಮಂಗಳೂರು—ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯದವರೆಗೆ ವಿಸ್ತರಣೆ - Mahanayaka
10:02 PM Wednesday 27 - August 2025

ಮಂಗಳೂರು—ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯದವರೆಗೆ ವಿಸ್ತರಣೆ

subrahmanya road train
26/02/2025


Provided by

Mangalore– Puttur Passenger Train–ದಕ್ಷಿಣ ಕನ್ನಡ:  ಮಂಗಳೂರಿನಿಂದ ಪುತ್ತೂರಿನವರೆಗೆ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲು ಇನ್ನು ಮುಂದೆ ಸುಬ್ರಹ್ಮಣ್ಯ ರೋಡ್(ನೆಟ್ಟಣ) ನಿಲ್ದಾಣದ ವರೆಗೆ ವಿಸ್ತರಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

ರೈಲ್ವೆ ಮಂಡಳಿಯ ಜಂಟಿ ನಿರ್ದೇಶಕರಾದ ವಿವೇಕ್ ಕುಮಾರ್ ಸಿನ್ಹಾ ಅವರು ಹೊರಡಿರುವ ಆದೇಶದಲ್ಲಿ ಈ ರೈಲು ಸುಬ್ರಹ್ಮಣ್ಯ ರೋಡ್ ಅಥವಾ ನೆಟ್ಟಣ ರೈಲ್ವೆ ನಿಲ್ದಾಣದವರೆಗೆ ವಿಸ್ತರಣೆಯಾಗಲು  ಒಪ್ಪಿಗೆ ನೀಡಲಾಗಿದೆ.

ಇದರಿಂದಾಗಿ ಸುಬ್ರಹ್ಮಣ್ಯಕ್ಕೆ ಬರುವ ಯಾತ್ರಾರ್ಥಿಗಳಿಗೆ ಸಹಕಾರವಾಗಲಿದೆ. ಜೊತೆಗೆ  ಕಡಬ ತಾಲೂಕು ಕೇಂದ್ರ ಕೋಡಿಂಬಾಳ ನಿಲ್ದಾಣ, ನೆಟ್ಟಣ, ಎಡಮಂಗಲ, ಕಾಣಿಯೂರು, ಸರ್ವೇ ಮೊದಲಾದ ಭಾಗಗಳ ಜನರು ಕಡಿಮೆ ಪ್ರಯಾಣ ದರದಲ್ಲಿ ಮತ್ತು ಆರಾಮದಾಯಕವಾಗಿ ಮಂಗಳೂರಿಗೆ ಪ್ರಯಾಣಿಸಿ ಬರಲು ಸಾಧ್ಯವಾಗುತ್ತದೆ.

ವೇಳಾ ಪಟ್ಟಿ:

ಮಂಗಳೂರು ಸೆಂಟ್ರಲ್–ಕಬಕ ಪುತ್ತೂರು–ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್ ರೈಲು (ಗಾ.ನಂ 56625) ಮುಂಜಾನೆ 4 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಕಬಕ-ಪುತ್ತೂರಿಗೆ ಮುಂಜಾನೆ 5:18ಕ್ಕೆ ತಲುಪಲಿದೆ. ಅಲ್ಲಿ 2 ನಿಮಿಷ ನಿಲುಗಡೆಯಾಗಿ ಬೆಳಗ್ಗೆ 6:30ಕ್ಕೆ ಸುಬ್ರಹ್ಮಣ್ಯ ರೋಡ್‌ ನಿಲ್ದಾಣ ತಲುಪಲಿದೆ.

ಸುಬ್ರಹ್ಮಣ್ಯ-ಮಂಗಳೂರು (ಗಾ.ನಂ 56626) ಪ್ಯಾಸೆಂಜರ್ ರೈಲು ಬೆಳಗ್ಗೆ 7ಕ್ಕೆ ಸುಬ್ರಹ್ಮಣ್ಯದಿಂದ ಹೊರಟು 7:48ಕ್ಕೆ ಕಬಕ–ಪುತ್ತೂರು ತಲುಪಿ, ಅಲ್ಲಿ 2 ನಿಮಿಷ ನಿಲುಗಡೆಯಾಗಿ 9:30ಕ್ಕೆ ಮಂಗಳೂರು ಸೆಂಟ್ರಲ್​ಗೆ ತಲುಪಲಿದೆ.

ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್ ರೈಲು(56627) ಮತ್ತೆ ಸಂಜೆ 5:45ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಸಂಜೆ 7:03ಕ್ಕೆ ಪುತ್ತೂರಿಗೆ ತಲುಪಲಿದೆ. ಬಳಿಕ ಎರಡು ನಿಮಿಷ ನಿಲುಗಡೆಯಾಗಿ ರಾತ್ರಿ 8:10ಕ್ಕೆ ಸುಬ್ರಹ್ಮಣ್ಯ ರಸ್ತೆಗೆ ತಲುಪಲಿದೆ ಸುಬ್ರಹ್ಮಣ್ಯ ರಸ್ತೆ-ಮಂಗಳೂರು ಪ್ಯಾಸೆಂಜರ್ ರೈಲು(56628) ರಾತ್ರಿ 8:40ಕ್ಕೆ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಿಂದ ಹೊರಟು ರಾತ್ರಿ 9:28ಕ್ಕೆ ಕಬಕ–ಪುತ್ತೂರಿಗೆ ತಲುಪಿ ಅಲ್ಲಿ 2 ನಿಲುಗಡೆಯಾಗಿ ರಾತ್ರಿ 11:10ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ