ಮಂಗಳೂರು: ಜ.30ರಿಂದ ಕದ್ರಿ ಪಾರ್ಕ್‌ನಲ್ಲಿ ‘ಸ್ಟ್ರೀಟ್‌ ಫುಡ್ ಫೆಸ್ಟಿವಲ್’ - Mahanayaka
2:17 PM Wednesday 28 - January 2026

ಮಂಗಳೂರು: ಜ.30ರಿಂದ ಕದ್ರಿ ಪಾರ್ಕ್‌ನಲ್ಲಿ ‘ಸ್ಟ್ರೀಟ್‌ ಫುಡ್ ಫೆಸ್ಟಿವಲ್’

kadri
28/01/2026

ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಆಹಾರ ಮೇಳವು ಜ.30ರಿಂದ ಫೆಬ್ರವರಿ 1ರವರೆಗೆ ನಗರದ ಕದ್ರಿ ಪಾರ್ಕ್‌ನಲ್ಲಿ ನಡೆಯಲಿದೆ.

ಆಹಾರ ಮೇಳವು ಕರಾವಳಿಯ ವೈವಿಧ್ಯಮಯ ಹಾಗೂ ಸಮೃದ್ಧ ಪಾಕ ಪರಂಪರೆಯನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿದ್ದು, ಸ್ಥಳೀಯ ಹಾಗೂ ಸಾಂಪ್ರದಾಯಿಕ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವೇದಿಕೆ ಕಲ್ಪಿಸಲಿದೆ.

ಈ ಉತ್ಸವದಲ್ಲಿ ಎಲ್ಲ ವರ್ಗದ ಜನರಿಗೆ ರುಚಿಕರ ಹಾಗೂ ವೈವಿಧ್ಯಮಯ ತಿನಿಸುಗಳು ಲಭ್ಯವಿರಲಿವೆ. ಹೆಚ್ಚಿನ ಮಾಹಿತಿಗೆ ಮೊ.ಸಂ.: 9449035570, 9243388835 ಸಂಪರ್ಕಿಸಬಹುದು ಎಂದು ಸ್ಟ್ರೀಟ್‌ ಫುಡ್ ಫೆಸ್ಟಿವಲ್ ಸಮಿತಿಯ ಅಧ್ಯಕ್ಷರು ಹಾಗೂ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ