ಮಂಗಳೂರು ವಿವಿ ಪುರುಷರ ವಸತಿ ನಿಲಯ ವಿದ್ಯಾರ್ಥಿ ಪರಿಷತ್ ಚುನಾವಣೆ: ವಾಯ್ಸ್ ಆಫ್ ಸ್ಟೂಡೆಂಟ್ಸ್ ಜಯಭೇರಿ - Mahanayaka
10:52 AM Saturday 15 - November 2025

ಮಂಗಳೂರು ವಿವಿ ಪುರುಷರ ವಸತಿ ನಿಲಯ ವಿದ್ಯಾರ್ಥಿ ಪರಿಷತ್ ಚುನಾವಣೆ: ವಾಯ್ಸ್ ಆಫ್ ಸ್ಟೂಡೆಂಟ್ಸ್ ಜಯಭೇರಿ

mangalore vv
15/11/2025

ಮಂಗಳೂರು: ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿಯ ಪುರುಷರ ವಸತಿ ನಿಲಯದ ವಿದ್ಯಾರ್ಥಿ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ABVP ಬೆಂಬಲಿತ ಅಭ್ಯರ್ಥಿಗಳನ್ನು ಮಣಿಸುವ ಮೂಲಕ ಹತ್ತಕ್ಕೆ ಹತ್ತು ಸ್ಥಾನಗಳಲ್ಲಿ Voice of Students ವಿದ್ಯಾರ್ಥಿ ತಂಡ ಜಯಭೇರಿ ಬಾರಿಸಿದೆ.

ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿ ಇದೊಂದು ಮಹತ್ವದ ಬೆಳವಣಿಗೆಯಾಗಿದ್ದು ಮಹೇಶ್, ರಾಘವೇಂದ್ರ ಟಿ., ಮಂಜುನಾಥ, ಚೇತನ್ ನಾಯಕ್, ಅಭಿಷೇಕ್ ಆರ್., ನಿತೀಶ್ ಕೆ.ಯು., ಯಮನೂರಪ್ಪ, ಅರುಣ್ ಮತ್ತು ಶ್ರೇಯಸ್ ಕೌನ್ಸಿಲ್ ಸದಸ್ಯರಾಗಿ ಆಯ್ಕೆಯಾದರು.

ವಿದ್ಯಾರ್ಥಿ ನಾಯಕ ಅಭಿಷೇಕ್ ವಾಲ್ಮೀಕಿ ಎರಡನೇ ಬಾರಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಗಮನ ಸೆಳೆದರು. ಅವರ ನೇತೃತ್ವದಲ್ಲಿ ನಡೆದ ವಿಜಯೋತ್ಸವದಲ್ಲಿ ವಿದ್ಯಾರ್ಥಿಗಳು ಬುದ್ಧ, ಬಸವಣ್ಣ, ಅಂಬೇಡ್ಕರ್, ಕುದ್ಮಲ್ ರಂಗರಾವ್, ನಾರಾಯಣ ಗುರು  ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ಹಿಡಿದು ಘೋಷ ವಾಕ್ಯಗಳನ್ನು ಕೂಗುವ ಮೂಲಕ ಭಾರತ ದೇಶ ಸರ್ವ ಜನಾಂಗದ ಶಾಂತಿಯ ತೋಟ ಅದನ್ನು ಯಾರಿಂದಲೂ ನಾಶ ಮಾಡಲಾಗದೆಂಬ ಸಂದೇಶವನ್ನು ಸಾರಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ