ಮಂಗಳೂರು: ವ್ಯಕ್ತಿಯ ಬರ್ಬರ ಹತ್ಯೆ, ಹತ್ಯೆಯಾದ ವ್ಯಕ್ತಿಯ ಇಬ್ಬರು ಮಕ್ಕಳಿಗೂ ಚೂರಿ ಇರಿತ! - Mahanayaka
11:37 PM Tuesday 21 - October 2025

ಮಂಗಳೂರು: ವ್ಯಕ್ತಿಯ ಬರ್ಬರ ಹತ್ಯೆ, ಹತ್ಯೆಯಾದ ವ್ಯಕ್ತಿಯ ಇಬ್ಬರು ಮಕ್ಕಳಿಗೂ ಚೂರಿ ಇರಿತ!

valachil
23/05/2025

ಮಂಗಳೂರು: ವ್ಯಕ್ತಿಯೊಬ್ಬರನ್ನು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಗಳೂರು ನಗರದ ಹೊರವಲಯದ ವಳಚ್ಚಿಲ್ ಪದವು ಎಂಬಲ್ಲಿ ನಡೆದಿದೆ.

ಸುಲೈಮಾನ್ ಎಂಬ ವ್ಯಕ್ತಿ ಕೊಲೆಯಾದ ವ್ಯಕ್ತಿಯಾಗಿದ್ದು, ವಳಚ್ಚಿಲ್ ನಿವಾಸಿ ಮುಸ್ತಫಾ ಎಂಬಾತ ಹತ್ಯೆ ನಡೆಸಿರುವ ಆರೋಪಿ ಎಂದು ಗುರುತಿಸಲಾಗಿದೆ.

ಪಿಲಿಕುಳ ಸಮೀಪದ ಎದುರುಪದವು ನಿವಾಸಿಯಾಗಿರುವ ಸುಲೈಮಾನ್ ತಮ್ಮ ಇಬ್ಬರು ಮಕ್ಕಳಾದ ಶಿಹಾಬ್ ಮತ್ತು ರಿಹಾಬ್ ಜೊತೆಗೆ ವಳಚ್ಚಿಲ್ ಪದವಿನ ಮನೆಗೆ ಕೌಟುಂಬಿಕ ಸಮಸ್ಯೆಯ ಬಗ್ಗೆ ಮಾತುಕತೆ ನಡೆಸಲು ಗುರುವಾರ ರಾತ್ರಿ ತೆರಳಿದ್ದರು.

ಈ ವೇಳೆ ಮಾತಿಗೆ ಮಾತು ಬೆಳೆದು ಮುಸ್ತಫಾ ಚೂರಿನಿಂದ ಸುಲೈಮಾನ್  ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದು, ಅವರ ಇಬ್ಬರು ಮಕ್ಕಳಿಗೂ ಚೂರಿಯಿಂದ ಇರಿದಿದ್ದಾನೆ.

ಗಂಭೀರವಾಗಿ ಗಾಯಗೊಂಡಿದ್ದ ಸುಲೈಮಾನ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.  ಶಿಹಾಬ್ ನ ಎದೆಗೆ ಗಂಭೀರವಾದ ಗಾಯವಾಗಿದ್ದು, ಅವರನ್ನು ಪಡೀಲ್ ನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ರಿಹಾಬ್ ನ ಕೈಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ