ಬ್ಯಾಂಕ್ ದರೋಡೆ:  ಬೀದರ್ ಘಟನೆಯ ಬೆನ್ನಲ್ಲೇ ಮಂಗಳೂರಿನಲ್ಲೂ ಗನ್, ತಲವಾರು ತೋರಿಸಿ ಬೆದರಿಸಿ ದರೋಡೆ - Mahanayaka

ಬ್ಯಾಂಕ್ ದರೋಡೆ:  ಬೀದರ್ ಘಟನೆಯ ಬೆನ್ನಲ್ಲೇ ಮಂಗಳೂರಿನಲ್ಲೂ ಗನ್, ತಲವಾರು ತೋರಿಸಿ ಬೆದರಿಸಿ ದರೋಡೆ

kotekar
17/01/2025


Provided by

ಉಳ್ಳಾಲ: ಬೀದರ್ ನಲ್ಲಿ ಎಟಿಎಂಗೆ ಹಣ ತುಂಬಿಸಲು ಬಂದಿದ್ದ ಸಿಬ್ಬಂದಿಯನ್ನು ಕೊಂದು ಹಣ ದರೋಡೆ ಮಾಡಿದ ಪ್ರಕರಣ ನಡೆದ ಮರುದಿನವೇ ಇದೀಗ ಮಂಗಳೂರಿನ ಉಳ್ಳಾಲದಲ್ಲಿ ಮತ್ತೊಂದು ಬ್ಯಾಂಕ್ ದರೋಡೆ ನಡೆದಿದ್ದು, ಕಾರೊಂದರಲ್ಲಿ ಬಂದ ದರೋಡೆಕೋರರು ಸಿಬ್ಬಂದಿಯನ್ನು ಬಂದೂಕು, ತಲವಾರು ತೋರಿಸಿ ಬೆದರಿಸಿ ನಗ—ನಗದು ದೋಚಿ ಪರಾರಿಯಾಗಿದ್ದಾರೆ.

ಕಾರೊಂದರಲ್ಲಿ ಬಂದ ಐವರು ದರೋಡೆಕೋರರ ತಂಡ ಈ ಕೃತ್ಯ ಎಸಗಿದೆ. ದರೋಡೆಕೋರರು ಎಲ್ಲರೂ ಮುಸುಕುಧಾರಿಗಳಾಗಿದ್ದರು. ಘಟನೆ ವೇಳೆ ಬ್ಯಾಂಕ್ ನಲ್ಲಿ ಮೂವರು ಮಹಿಳಾ ಸಿಬ್ಬಂದಿ ಹಾಗೂ ಒಬ್ಬ ಪುರುಷ ಸಿಬ್ಬಂದಿ ಹಾಗೂ ಒಬ್ಬ ಸಿಸಿ ಟಿವಿ ಟೆಕ್ನೀಷಿಯನ್  ಇದ್ದರು ಎಂದು ತಿಳಿದು ಬಂದಿದೆ.

ಬ್ಯಾಂಕ್ ನಲ್ಲಿದ್ದ ಸಿಬ್ಬಂದಿಗೆ ಬಂದೂಕು  ಹಾಗೂ ತಲವಾರು ತೋರಿಸಿ ಬೆದರಿಸಿ, ಲಾಕರ್ ನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ಲಕ್ಷಾಂತರ ರೂ. ನಗದು ದೋಚಿದ ದರೋರೆಕೋರರು ಕಾರಿನಲ್ಲಿ ಪರಾರಿಯಾಗಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ