ಕೌತುಕ: ಇಲ್ಲೊಂದು ಊರಲ್ಲಿ ಮಾವಿನ ತೋಟಕ್ಕೆ ಹೈಟೆಕ್ ಕಾವಲು; ಈ ಮ್ಯಾಂಗ್ಯೋ ಕೆಜಿಗೆ 3 ಲಕ್ಷ..! - Mahanayaka

ಕೌತುಕ: ಇಲ್ಲೊಂದು ಊರಲ್ಲಿ ಮಾವಿನ ತೋಟಕ್ಕೆ ಹೈಟೆಕ್ ಕಾವಲು; ಈ ಮ್ಯಾಂಗ್ಯೋ ಕೆಜಿಗೆ 3 ಲಕ್ಷ..!

07/05/2024


Provided by

ಮಾವಿನ ತೋಟದ ಸುತ್ತ ಸಿಸಿ ಕ್ಯಾಮೆರಾ.. ತರಬೇತಿ ಹೊಂದಿದ ನಾಯಿಗಳ ಕಾವಲು ಮತ್ತು ಕಾವಲುಗಾರರ ದಂಡೇ ಸುತ್ತುವರಿದಿರುವ ಸನ್ನಿವೇಶವನ್ನು ನೋಡಿದ್ದೀರಾ..? ಮಾವಿನ ತೋಟಕ್ಕೆ ಇಂತಹದ್ದೊಂದು ಕಾವಲು ಯಾಕೆ ಎಂಬ ಪ್ರಶ್ನೆ ನಿಮ್ಮಲ್ಲೂ ಇರಬಹುದು. ಆದರೆ ಬಿಹಾರ, ಒರಿಸ್ಸಾ, ತೆಲಂಗಾಣ, ಆಂಧ್ರ ಪ್ರದೇಶ ಮುಂತಾದ ಕಡೆ ಮಾವಿನ ತೋಟವನ್ನು ಕಣ್ಣಿಗೆ ಎಣ್ಣೆ ಹಚ್ಚಿ ಕಾವಲು ಕಾಯಲಾಗುತ್ತಿದೆ. ಯಾಕೆಂದರೆ ಈ ಮಾವಿನ ತೋಟದ ಒಂದು ಕೆಜಿ ಮಾವಿನ ಹಣ್ಣಿನ ಬೆಲೆ ಎರಡೂವರೇ ಲಕ್ಷದಿಂದ 3 ಲಕ್ಷ ರೂಪಾಯಿ.

ಹೌದು.
ಇದು ಸತ್ಯ.
ಈ ಮಾವಿನ ಹಣ್ಣಿನ ಹೆಸರು ಮಿಯಾ ಸಾಕಿ. ದೇಶದಲ್ಲಿ 1500 ಕ್ಕಿಂತಲೂ ಅಧಿಕ ಮಾವಿನ ತಳಿಗಳಿದ್ದರೂ ಈ ಬಗೆಯ ಈ ತಳಿಯನ್ನು ಸಾಮಾನ್ಯವಾಗಿ ಬೆಳೆಯಲಾಗುತ್ತಿಲ್ಲ. ಜಪಾನಿನ ಮಿಯಾಸಕಿ ಎಂಬಲ್ಲಿ ಈ ಮಾವಿನ ಹಣ್ಣನ್ನು ಹೆಚ್ಚಾಗಿ ಬೆಳೆಯುವುದರಿಂದ ಇದಕ್ಕೆ ಆ ಹೆಸರು ಬಂದಿದೆ. ಪರ್ಪಲ್ ಬಣ್ಣದ ಈ ಮಾವು ಹಣ್ಣಾಗುವಾಗ ಕಡು ಕೆಂಪಾಗಿ ಮಾರ್ಪಡುತ್ತದೆ. ಒಂದು ಮಾವಿನಹಣ್ಣು ಸುಮಾರು 350 ಗ್ರಾಂ ತೂಗಬಳ್ಳುದು. ಏಪ್ರಿಲ್ ನಿಂದ ಆಗಸ್ಟ್ ನಡುವಿನ ಅವಧಿಯಲ್ಲಿ ಈ ಮಾವು ಬೆಳೆಯುತ್ತದೆ. ಈ ಮಾವಿಗೆ ಇರುವ ವಿಪರೀತ ಬೆಲೆಯಿಂದಾಗಿ ಅದನ್ನು ಕದ್ದುಕೊಂಡು ಹೋಗದಂತೆ ತಡೆಯುವುದಕ್ಕೆ ವಿವಿಧ ರೀತಿಯ ಕಸರತ್ತುಗಳನ್ನು ರೈತರು ಮಾಡುತ್ತಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ