ದರೋಡೆಕೋರರ ಬಂಧನಕ್ಕಾಗಿ ತೀವ್ರ ಶೋಧ: ಟ್ರಾಫಿಕ್ ಜಾಮ್ ನಿಂದ ಜನ ಪರದಾಟ - Mahanayaka
3:43 PM Thursday 18 - December 2025

ದರೋಡೆಕೋರರ ಬಂಧನಕ್ಕಾಗಿ ತೀವ್ರ ಶೋಧ: ಟ್ರಾಫಿಕ್ ಜಾಮ್ ನಿಂದ ಜನ ಪರದಾಟ

chamarajanagara
12/08/2023

ಚಾಮರಾಜನಗರ: ಚಿನ್ನದ ವ್ಯಾಪಾರಿ ಕಾರು ಅಡ್ಡಗಟ್ಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತ್ತೆಗೆ ಚಾಮರಾಜನಗರ ಪೊಲೀಸರು ಬಲೆ ಬೀಸಿದ್ದಾರೆ.

ಪರಾರಿಯಾಗಿರುವ ದರೋಡೆಕೋರರ ಸೆರೆಗೆ ತೀವ್ರ ಶೋಧ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗುಂಡ್ಲುಪೇಟೆಯಿಂದ ಕೇರಳ, ತಮಿಳುನಾಡಿಗೆ ತೆರಳುವವರು ಟ್ರಾಫಿಕ್ ಸಮಸ್ಯೆಗೆ ಸಿಲುಕುತ್ತಿದ್ದಾರೆ. ದರೋಡೆಕೋರರಿಗಾಗಿ ನಡೆಸುತ್ತಿರುವ ತಪಾಸಣೆಯಿಂದ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ವಾರಾಂತ್ಯದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಕೇರಳ, ಊಟಿಗೆ ಲಗ್ಗೆ ಹಾಕುವುದರಿಂದ ನೂರಾರು ವಾಹನಗಳು ಸಾಲುಗಟ್ಟಿ ನಿಲ್ಲುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.  ಶುಕ್ರವಾರ

ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಕೇರಳ ಮೂಲದ ಚಿನ್ನದ ವ್ಯಾಪಾರಿ ಸುಖದೇವ್ ಕಾರು ಅಡ್ಡಗಟ್ಟಿ ದರೋಡೆ ನಡೆಸಿ 40 ಲಕ್ಷ ರೂ. ಹಣ ದೋಚಿದ್ದರು.

ಪ್ರಕರಣದ ಸಂಬಂಧ ಐವರು ಬಂಧಿತರಾಗಿದ್ದು ತಲೆಮರೆಸಿಕೊಂಡಿರುವ ಮತ್ತಷ್ಟು ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ