ಮಣಿಪುರದಲ್ಲಿ ಹಿಂಸಾಚಾರ: ಜುಲೈ 10ರವರೆಗೆ ಇಂಟರ್ನೆಟ್ ನಿಷೇಧ ವಿಸ್ತರಣೆ - Mahanayaka

ಮಣಿಪುರದಲ್ಲಿ ಹಿಂಸಾಚಾರ: ಜುಲೈ 10ರವರೆಗೆ ಇಂಟರ್ನೆಟ್ ನಿಷೇಧ ವಿಸ್ತರಣೆ

06/07/2023


Provided by

ಹಿಂಸಾಚಾರದ ಹಿನ್ನೆಲೆಯಲ್ಲಿ ಮಣಿಪುರ ಸರ್ಕಾರವು ರಾಜ್ಯದಲ್ಲಿ ಇಂಟರ್ ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಜುಲೈ 10ರವರೆಗೆ ವಿಸ್ತರಿಸಿದೆ. ಪ್ರಾಣಹಾನಿ, ಸಾರ್ವಜನಿಕ / ಖಾಸಗಿ ಆಸ್ತಿಪಾಸ್ತಿಗೆ ಹಾನಿ ಮತ್ತು ಸಾರ್ವಜನಿಕ ಶಾಂತಿಗೆ ವ್ಯಾಪಕ ಅಡಚಣೆಗಳನ್ನು ತಡೆಗಟ್ಟಲು ಈ ರೀತಿಯ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಮಣಿಪುರ ಗೃಹ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ಟೆಲಿಕಾಂ ಸೇವೆಗಳ ತಾತ್ಕಾಲಿಕ ಅಮಾನತು (ಸಾರ್ವಜನಿಕ ತುರ್ತು ಅಥವಾ ಸಾರ್ವಜನಿಕ ಸುರಕ್ಷತೆ) ನಿಯಮಗಳು, 2017 ರ ನಿಯಮ 2 ರ ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಚಲಾಯಿಸುವಾಗ ಪರಿಸ್ಥಿತಿಯು ಶಾಂತಿ, ಸಹಬಾಳ್ವೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆಗೆ ಗಂಭೀರ ತೊಂದರೆಗಳನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದಾಗ ಮೊಬೈಲ್ ಡೇಟಾ ಸೇವೆಗಳು, ಇಂಟರ್ ನೆಟ್ / ಡೇಟಾ ಸೇವೆಗಳನ್ನು ಮತ್ತಷ್ಟು ಅಮಾನತುಗೊಳಿಸಲು ಅಥವಾ ನಿಗ್ರಹಿಸಲು ಈ ಮೂಲಕ ಆದೇಶಿಸಲಾಗಿತ್ತದೆ ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ.

ರಿಲಯನ್ಸ್ ಜಿಯೋ ಫೈಬರ್, ಏರ್ ಟೆಲ್ ಎಕ್ಸ್ ಟ್ರಿಮ್ ಬ್ಲ್ಯಾಕ್, ಬಿಎಸ್ಎನ್ಎಲ್ ಎಫ್ಟಿಟಿಎಚ್, ವಿಪಿಎನ್ ಇತ್ಯಾದಿ ಸೇರಿದಂತೆ ಮಣಿಪುರ ರಾಜ್ಯದ ಪ್ರಾದೇಶಿಕ ವ್ಯಾಪ್ತಿಯಲ್ಲಿ ಭಾರತ್ ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಅಧಿಕೃತ ಅಧಿಸೂಚನೆಯ ಪ್ರಕಾರ, ಈ ಅಮಾನತು ಆದೇಶವು ಜುಲೈ 10 ರ ಮಧ್ಯಾಹ್ನ 3 ಗಂಟೆಯವರೆಗೆ ಚಾಲ್ತಿಯಲ್ಲಿರುತ್ತದೆ‌.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ