ಮಂತ್ರಾಲಯಕ್ಕೆ ಹೊರಟಿದ್ದ ಕೆ ಎಸ್‌ ಆರ್‌ ಟಿಸಿ ಬಸ್​ ನಲ್ಲಿ​ ಕುಸಿದುಬಿದ್ದು ಕಂಡಕ್ಟರ್​ ಸಾವು - Mahanayaka

ಮಂತ್ರಾಲಯಕ್ಕೆ ಹೊರಟಿದ್ದ ಕೆ ಎಸ್‌ ಆರ್‌ ಟಿಸಿ ಬಸ್​ ನಲ್ಲಿ​ ಕುಸಿದುಬಿದ್ದು ಕಂಡಕ್ಟರ್​ ಸಾವು

ksrtc
23/02/2022

ಆಂಧ್ರಪ್ರದೇಶ: ಕರ್ತವ್ಯನಿರತ ಕರ್ನಾಟಕ ಸಾರಿಗೆ ಬಸ್ ನಿರ್ವಾಹಕರೊಬ್ಬರು ಹೃದಯಾಘಾತದಿಂದ ಕೊನೆಯುಸಿರೆಳೆದ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

ತುಮಕೂರು ಡಿಪೋ-2ರಲ್ಲಿ ನಿರ್ವಾಹಕರಾಗಿದ್ದ ತಿಪ್ಪೇಸ್ವಾಮಿ ಮೃತಪಟ್ಟ ಕಂಡಕ್ಟರ್​ ಆಗಿದ್ದಾರೆ. ಇವರು ಬೆಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಬಸ್​ನಲ್ಲಿ ಕರ್ತವ್ಯದಲ್ಲಿದ್ದರು. ಕರ್ನೂಲ್​ನ ಢಾಣಾಪುರ ನಿಲ್ದಾಣದಲ್ಲಿ ಬಸ್​​ ನಿಲ್ಲಿಸಿ, ಬಳಿಕ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಟಿದ್ದರು. ಆದರೆ ಬಸ್​ ಬಾಗಿಲು ಹಾಕಿಕೊಂಡು ಸೀಟಿನಲ್ಲಿ ಕುಳಿತುಕೊಳ್ಳಲು ಬರುತ್ತಿದ್ದಾಗಲೇ ತಿಪ್ಪೇಸ್ವಾಮಿ ದಿಢೀರ್​ ಕುಸಿದು ಬಿದ್ದಿದ್ದಾರೆ.

ಇದನ್ನು ಕಂಡ ಪ್ರಯಾಣಿಕರು ಬಸ್​ ಚಾಲಕ ರಾಮಲೀಲಾ ಅವರಿಗೆ ತಿಳಿಸಿದ್ದಾರೆ. ತಕ್ಷಣ ಬಸ್​​ನಲ್ಲಿದ್ದ​ ಪ್ರಯಾಣಿಕರನ್ನು ಅಲ್ಲೇ ಇಳಿಸಿ, ನಿರ್ವಾಹಕ ತಿಪ್ಪೇಸ್ವಾಮಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕೆ ಹೊತ್ತಲ್ಲೇ ಅವರು ಮೃತಪಟ್ಟಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹತ್ಯೆಗೂ ಮೊದಲು ಹರ್ಷನಿಗೆ ಬಂದಿತ್ತೇ ವಿಡಿಯೋ ಕಾಲ್?

ಪ್ರೇಮ ವಿವಾಹವಾದ ನವದಂಪತಿ ಆತ್ಮಹತ್ಯೆಗೆ ಶರಣು

ಮೇಲಾಧಿಕಾರಿಗಳ ಕಿರುಕುಳ: ಡೆತ್ ನೋಟ್ ಬರೆದಿಟ್ಟು ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

ತರಕಾರಿ ಸಾಗಿಸುವ ನೆಪದಲ್ಲಿ 65 ಕ್ವಿಂಟಾಲ್ ಅಕ್ರಮ ಅನ್ನಭಾಗ್ಯ ಅಕ್ಕಿ ಸಾಗಾಟ

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ: 59 ಕ್ಷೇತ್ರಗಳಿಗೆ 4ನೇ ಹಂತದ ಮತದಾನ ಆರಂಭ

 

ಇತ್ತೀಚಿನ ಸುದ್ದಿ