ಮರಕ್ಕೆ ಡಿಕ್ಕಿ ಹೊಡೆದ ಪಿಕಪ್ ವಾಹನ: ಕ್ಯಾಟರಿಂಗ್ ಮುಗಿಸಿ ಬರುತ್ತಿದ್ದ  ಇಬ್ಬರು ಯುವಕರ ದಾರುಣ ಸಾವು! - Mahanayaka
11:08 PM Wednesday 15 - October 2025

ಮರಕ್ಕೆ ಡಿಕ್ಕಿ ಹೊಡೆದ ಪಿಕಪ್ ವಾಹನ: ಕ್ಯಾಟರಿಂಗ್ ಮುಗಿಸಿ ಬರುತ್ತಿದ್ದ  ಇಬ್ಬರು ಯುವಕರ ದಾರುಣ ಸಾವು!

bantwala news
14/11/2021

ಬಂಟ್ವಾಳ:  ಕ್ಯಾಟರಿಂಗ್ ವಾಹನವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಂಟ್ವಾಳ ತಾಲೂಕಿನ ಮಂಗಳೂರು—ಬಿ.ಸಿ.ರೋಡ್ ರಸ್ತೆಯ ಬ್ರಹ್ಮರಕೂಟ್ಲು ಸಮೀಪದ ರಾಮಲ್ ಕಟ್ಟೆ ಎಂಬಲ್ಲಿ ನಡೆದಿದೆ.


Provided by

25 ವರ್ಷ ವಯಸ್ಸಿನ ಚೇತನ್ ಹಾಗೂ 21 ವರ್ಷ ವಯಸ್ಸಿನ ಆಶೀತ್ ಮೃತಪಟ್ಟವರು ಎಂದು ಗುರುತಿಸಲಾಗಿದ್ದು,  ಸಿಂಚನ್ ಹಾಗೂ ಸುದೀಪ್ ಎಂಬವರು ಘಟನೆಯಲ್ಲಿ ಗಾಯಗೊಂಡಿದ್ದು, ವರದಿಗಳ ಪ್ರಕಾರ ಪ್ರಕಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕ್ಯಾಟರಿಂಗ್ ವೊಂದಕ್ಕೆ ಆಹಾರ ಸಾಗಾಟ ಮಾಡಿ, ಪಿಕಪ್ ವಾಹನದಲ್ಲಿ ವಾಪಸ್ ಆಗುತ್ತಿದ್ದ ವೇಳೆ ಪಿಕಪ್ ಚಾಲಕನ ನಿಯಂತ್ರಣ ತಪ್ಪಿ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ. ಘಟನೆ ನಡೆದ ವೇಳೆ ತಕ್ಷಣವೇ ಗಾಯಾಳುಗಳನ್ನು ತುಂಬೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ಸಿನಿಮಾ ಮಂದಿರದ ಹೊರಗಡೆ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ನಡೆಸಿದ ಶಿವರಾಜ್ ಕುಮಾರ್

ರಾಜ್ಯದ ಬಿಟ್ ಕಾಯಿನ್ ಹಗರಣ ವಿಚಾರಕ್ಕೆ ಎಂಟ್ರಿಯಾದ ರಾಹುಲ್ ಗಾಂಧಿ!

ಮಕ್ಕಳಿಗೆ ಸಿಹಿ ಹಂಚುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯನ್ನು ಎಳೆದೊಯ್ದು ಕತ್ತುಕೊಯ್ದ | ಬೆಚ್ಚಿ ಬಿದ್ದ ಜನತೆ

ದೆಹಲಿಯಲ್ಲಿ ಒಂದು ದಿನ ಉಸಿರಾಡೋದು 20 ಸಿಗರೇಟ್ ಸೇದಿದ್ದಕ್ಕೆ ಸಮಾನ! | ದೆಹಲಿಯಲ್ಲೀಗ ಆಕ್ಸಿಜನ್ ಇಲ್ಲದೇ ಪರದಾಡುವ ಸ್ಥಿತಿ!

ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರ ದಾರುಣ ಸಾವು!

ರಚಿತಾ ರಾಮ್  “ಫಸ್ಟ್ ನೈಟ್” ಹೇಳಿಕೆಗೆ ಆಕ್ಷೇಪ: ಕ್ಷಮೆಯಾಚನೆಗೆ ಒತ್ತಾಯ

ಪುನೀತ್ ಗೆ ಅವಮಾನ ಆರೋಪ: “ಅದು ಶಾಂಪೇನ್ ಬಾಟಲಿ ಆಗಿರಲಿಲ್ಲ” | ರಕ್ಷಿತಾ ಪ್ರೇಮ್ ಸ್ಪಷ್ಟನೆ

ಇತ್ತೀಚಿನ ಸುದ್ದಿ