ಅಪಘಾತದಲ್ಲಿ ಮರ್ಮಾಂಗ ಊನಗೊಂಡ ಯುವಕನಿಗೆ 17.66 ಲಕ್ಷ ರೂ. ಪರಿಹಾರ - Mahanayaka
1:18 AM Wednesday 15 - October 2025

ಅಪಘಾತದಲ್ಲಿ ಮರ್ಮಾಂಗ ಊನಗೊಂಡ ಯುವಕನಿಗೆ 17.66 ಲಕ್ಷ ರೂ. ಪರಿಹಾರ

accident
26/01/2022

ಬೆಂಗಳೂರು: ಅಪಘಾತದಲ್ಲಿ  ಮರ್ಮಾಂಗಕ್ಕೆ ತೀವ್ರವಾಗಿ ಹಾನಿಯಾಗಿದ್ದ ಯುವಕನಿಗೆ ಹೈಕೋರ್ಟ್ 17.66 ಲಕ್ಷ ಪರಿಹಾರ ನಿಗದಿ ಪಡಿಸಿದ್ದು, ಈ ಕುರಿತು ಬಸವರಾಜು ಎಂಬವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಸ್.ಪಂಡಿತ್ ಮತ್ತು ನ್ಯಾಯಮೂರ್ತಿ ಎ.ಆರ್.ಹೆಗಡೆ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿದೆ.


Provided by

2011ರಲ್ಲಿ ಹಾವೇರಿಯಲ್ಲಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಸವರಾಜು ಅವರಿಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿತ್ತು. ಅಪಘಾತ ಪರಿಣಾಮವಾಗಿ ಅವರ ಮರ್ಮಾಂಗವು  ಅಂಗವೈಕಲ್ಯಕ್ಕೆ ಒಳಗಾಗಿದೆ. ಹೀಗಾಗಿ ಅವರು ಲೈಂಗಿಕ ಸುಖ ಅನುಭವಿಸಲು ಸಾಧ್ಯವಿಲ್ಲ ಎಂದು ವೈದ್ಯರ ಪ್ರಮಾಣ ಪತ್ರ ನೀಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಮೋಟಾರು ವಾಹನ ಅಪಘಾತ ನ್ಯಾಯಮಂಡಳಿಯು ಕೇವಲ 50 ಸಾವಿರ ಪರಿಹಾರ ನಿಗದಿ ಪಡಿಸಿ ಒಟ್ಟು 3.73 ಲಕ್ಷ ಪರಿಹಾರ ನೀಡಲು ವಿಮಾ ಕಂಪೆನಿಗೆ ಆದೇಶಿಸಿತ್ತು. ಆದರೆ, ಅರ್ಜಿದಾರ ಯುವಕ 11:75 ಲಕ್ಷ ಪರಿಹಾರ ಕೇಳಿದ್ದರು. ಆದರೆ, ನ್ಯಾಯ ಮಂಡಳಿಯು ಅದಕ್ಕಿಂತಲೂ ದೊಡ್ಡ ಮೊತ್ತವನ್ನು ಪರಿಹಾರವಾಗಿ ನಿಗದಿಪಡಿಸಿದೆ.

ಯುವಕನಿಗೆ ಆಗಿರುವ ವೈಕಲ್ಯ ಯಾವುದೇ ರೀತಿಯಲ್ಲೂ ಸರಿಪಡಿಸಲಾಗದು. ಅಪಘಾತದಿಂದಾಗಿ ಸಂತ್ರಸ್ತ ಯುವಕ ಮದುವೆಯಾಗಿದ್ದರೂ ಲೈಂಗಿಕ ಸುಖ ಅನುಭವಿಸಲು ಸಾಧ್ಯವಿಲ್ಲ. ಆದ್ದರಿಂದ ಪರಿಹಾರ ವಿಧಿಸುವಾಗ ಮಾನವೀಯ ಅಂಶಗಳಿಗೆ ಒತ್ತು ನೀಡಬೇಕು ಎಂದು ನ್ಯಾಯಪೀಠ ಹೇಳಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬೆತ್ತಲೆ ಗ್ಯಾಂಗ್ ಬ್ಲಾಕ್ ​ಮೇಲ್​​: ರೈಲಿಗೆ ತಲೆ ಕೊಟ್ಟು ಇಂಜಿನಿಯರ್ ಆತ್ಮಹತ್ಯೆಗೆ ಶರಣು

ಅರಣ್ಯ ಪ್ರದೇಶಕ್ಕೆ ಬೆಂಕಿ | ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ

ವಿಮಾನ ನಿಲ್ದಾಣದಲ್ಲಿ 29 ಲಕ್ಷ ರೂ. ಮೌಲ್ಯದ ಚಿನ್ನ ವಶ

ಆರ್ಯಭಟ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕಿ ಶೀಲಾ ದಿವಾಕರ್ ನಿಧನ

ಸಂವಿಧಾನ ಜಾರಿಗೆ ಬಂದ ದಿನ ಗಣರಾಜ್ಯೋತ್ಸವ

ಇತ್ತೀಚಿನ ಸುದ್ದಿ