ಮಾರುತಿ ಸುಜುಕಿ ಬಿಡುಗಡೆ ಮಾಡಲಿದೆ ಒಂದಲ್ಲ 5 ಹೊಸ ಕಾರು: ಇದರ ಬೆಲೆ ಅತ್ಯಂತ ಕಡಿಮೆ - Mahanayaka
11:44 PM Thursday 21 - August 2025

ಮಾರುತಿ ಸುಜುಕಿ ಬಿಡುಗಡೆ ಮಾಡಲಿದೆ ಒಂದಲ್ಲ 5 ಹೊಸ ಕಾರು: ಇದರ ಬೆಲೆ ಅತ್ಯಂತ ಕಡಿಮೆ

Maruti Suzuki
19/09/2024


Provided by

ಮಾರುತಿ ಸುಜುಕಿ ಕೆಲವೇ ತಿಂಗಳುಗಳಲ್ಲಿ ಒಂದಲ್ಲ 5 ನೂತನ ಕಾರುಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದ್ದು, ಈ ಕಾರುಗಳ ಬೆಲೆಗಳು ಕೂಡ ಗ್ರಾಹಕ ಸ್ನೇಹಿಯಾಗಿರಲಿದ್ದು, ಈ ಕಾರುಗಳ ಬೆಲೆ 10 ಲಕ್ಷಕ್ಕಿಂತ ಕಡಿಮೆ ಇರುವ ಸಾಧ್ಯತೆಗಳಿವೆಯಂತೆ!
ಮಾರುತಿ ಸುಜುಕಿ ಮುಂದೆ ಬಿಡುಗಡೆ ಮಾಡಲಿರುವ ಕಾರುಗಳು ಯಾವುದು? ಮತ್ತು ಅದರ ವೈಶಿಷ್ಠ್ಯಗಳೇನು ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ…

ಹೊಸ ಮಾರುತಿ ಡಿಜೈರ್:

ಮುಂದಿನ ಕೆಲವು ತಿಂಗಳುಗಳಲ್ಲಿ ಹೊಸ ಮಾರುತಿ ಡಿಜೈರ್ ಮಾರಾಟ ಪ್ರಾರಂಭವಾಗಲಿದೆ. ಈ ಬಾರಿ ಈ ಕಾರಿನಲ್ಲಿ ನಯವಾದ ವಿನ್ಯಾಸ, ಹೊಸದಾದ ಒಳಾಂಗಣ ಮತ್ತು ಎಂಜಿನ್ ನೀಡಲಾಗುವುದು. ಈ ಸೆಡಾನ್ 1.2 ಲೀಟರ್, Z– ಸರಣಿಯ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದ್ದು, ಇದು 82 bhp ಪವರ್ ಮತ್ತು 112 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಇರುತ್ತದೆ. ಇದಲ್ಲದೆ, ಈ ಕಾರು ಸಿಎನ್‌ಜಿ ಇಂಧನ ಆಯ್ಕೆಯೊಂದಿಗೆ ಬರಲಿದೆ ಎಂದು ಹೇಳಲಾಗಿದೆ.

ಮಾರುತಿ ಫ್ರಂಟ್ ಫೇಸ್ ಲಿಫ್ಟ್:

ಫ್ರಂಟ್ ಫೇಸ್‌ಲಿಫ್ಟ್ ಅನ್ನು 2025 ರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮಾರುತಿ ಹೇಳಿದೆ. ಇದು ಹೊಸ ಹೈಬ್ರಿಡ್ ವ್ಯವಸ್ಥೆಯೊಂದಿಗೆ ಬರಲಿದೆ, ಈ ಕಾರು ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದೆ. ಕಾರಿನ ವಿನ್ಯಾಸ ಮತ್ತು ಒಳಾಂಗಣದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಬಹುದು ಎಂಬ ನಿರೀಕ್ಷೆಯಿದೆ.

ಹೊಸ ಮಾರುತಿ ಕಾಂಪ್ಯಾಕ್ಟ್ ಎಂಪಿವಿ:

ಮಾರುತಿ ಸುಜುಕಿ ಹೊಸ ಕಾಂಪ್ಯಾಕ್ಟ್ ಎಂಪಿವಿ ಅನ್ನು ತಯಾರು ಮಾಡುತ್ತಿದೆ. ಇದು 2026 ರ ವೇಳೆಗೆ ಬಿಡುಗಡೆಯಾಗಲಿದೆ. ಇದಕ್ಕೆ ವೈಡಿಬಿಎಂಬ ಸಂಕೇತನಾಮವನ್ನು ನೀಡಲಾಗಿದೆ. ಇದು ಮೂರು ಸಾಲುಗಳ ಆಸನ ವ್ಯವಸ್ಥೆಯನ್ನು ಹೊಂದಿರುತ್ತದೆ. ಈ ಕಾರು ಕಂಪನಿಯ ಶ್ರೇಣಿಯಲ್ಲಿ ಎರ್ಟಿಗಾ ಮತ್ತು XL6 ಗಿಂತ ಕಡಿಮೆ ಬೆಲೆಗೆ ಸಿಗಲಿದೆಯಂತೆ. ಇದನ್ನು 1.2 ಲೀಟರ್ ಝೆಡ್- ಸರಣಿಯ ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಬಹುದು. ಈ ಎಂಜಿನ್ ಹೊಸ ಸ್ವಿಫ್ಟ್ ನಲ್ಲೂ ಲಭ್ಯವಿದೆ.

ಮಾರುತಿಯ ಹೊಸ ಮೈಕ್ರೋ ಎಸ್ ಯುವಿ:

ಮಾರುತಿ ಸುಜುಕಿಯ ಸಾಲಿಗೆ ಹೊಸ ಮೈಕ್ರೋ ಎಸ್‌ಯುವಿ ಕೂಡ ಸೇರ್ಪಡೆಯಾಗಲಿದೆ. ಈ ಮೂಲಕ ಗ್ರಾಹಕರನ್ನು ಮತ್ತಷ್ಟು ಖುಷಿ ಪಡಿಸಲು ಮುಂದಾಗಿದೆ. ಇದಕ್ಕೆ ವೈ43 ಎಂಬ ಸಂಕೇತನಾಮವನ್ನು ನೀಡಲಾಗಿದೆ. ಈ ಪ್ರವೇಶ ಮಟ್ಟದ ಎಸ್‍ಯುವಿ 2026 ಮತ್ತು 27ರ ನಡುವೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಬಿಡುಗಡೆಯ ನಂತರ, ಇದು ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸೆಟರ್‌ನಂತಹ ಕಾರುಗಳೊಂದಿಗೆ ಸ್ಪರ್ಧಿಸುತ್ತದೆ.

ಹೊಸ ತಲೆಮಾರಿನ ಬಲೆನೊ:

ಹೊಸ ತಲೆಮಾರಿನ ಮಾರುತಿ ಬಲೆನೊ ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ. ಗಟ್ಟಿಮುಟ್ಟಾದ ಹೈಬ್ರಿಡ್ ವ್ಯವಸ್ಥೆಯೊಂದಿಗೆ ಬರುವ ಕಂಪನಿಯ ಕಾರುಗಳಲ್ಲಿ ಇದನ್ನು ಸೇರಿಸಲಾಗುತ್ತದೆ. 2026 ರ ವೇಳೆಗೆ ಹೊಸ ಬಲೆನೊ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ