ಮಸ್ಕಿಯಲ್ಲಿ ಮುಗ್ಗರಿಸಿದ ಪ್ರತಾಪ್ ಗೌಡ ಪಾಟೀಲ್ | ಬಿಜೆಪಿಗೆ ಹೀನಾಯ ಸೋಲು - Mahanayaka
10:48 AM Saturday 18 - October 2025

ಮಸ್ಕಿಯಲ್ಲಿ ಮುಗ್ಗರಿಸಿದ ಪ್ರತಾಪ್ ಗೌಡ ಪಾಟೀಲ್ | ಬಿಜೆಪಿಗೆ ಹೀನಾಯ ಸೋಲು

maski election
02/05/2021

ರಾಯಚೂರು: ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸಿದ್ದು, ಪ್ರತಾಪ್ ಗೌಡ ಪಾಟೀಲ್ ಗೆ ತೀವ್ರ ಮುಜುಗರ ಉಂಟಾಗಿದೆ.


Provided by

ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳ್ ಅವರು 13 ಸಾವಿರ ಮತಗಳಿಗೂ ಅಧಿಕ ಮುನ್ನಡೆ ಪಡೆದು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಅವರಿಗೆ ಸೋಲುಣಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳ್ 35,901 ಮತಗಳನ್ನು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ 22,914 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲರು ತಮ್ಮ ವಿಧಾನಸಭಾ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಪಕ್ಷಾಂತರಿಯಾದ ಪಾಟೀಲ್ ಅವರ ವಿರುದ್ಧ  ಮಸ್ಕಿ ಕ್ಷೇತ್ರ ಮತ ಚಲಾಯಿಸಿದೆ.

ಇತ್ತೀಚಿನ ಸುದ್ದಿ