ಮತಾಂತರ ತಡೆಯಲು ವಿಶೇಷ ಕಾರ್ಯಪಡೆ:  ಸಿಎಂ ಬೊಮ್ಮಾಯಿ - Mahanayaka
11:53 AM Tuesday 2 - December 2025

ಮತಾಂತರ ತಡೆಯಲು ವಿಶೇಷ ಕಾರ್ಯಪಡೆ:  ಸಿಎಂ ಬೊಮ್ಮಾಯಿ

cm bommai
30/12/2021

ಬೆಂಗಳೂರು:  ರಾಜ್ಯದಲ್ಲಿ ಮತಾಂತರ ತಡೆ ಮಸೂದೆ  ಕಾನೂನಾಗಿ ಪರಿವರ್ತನೆಯಾದ ತಕ್ಷಣವೇ ಮತಾಂತರ ತಡೆಯಲು ವಿಶೇಷ ಕಾರ್ಯಪಡೆ ರಚಿಸಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ ಎಂದು ವರದಿಯಾಗಿದೆ.

ವಿಧಾನಸಭೆಯಲ್ಲಿ ಈಗಾಗಲೇ ಮಸೂದೆಯು ಒಪ್ಪಿಗೆ ಪಡೆದಿದ್ದು, ಜನವರಿ ಅಥವಾ ಫೆಬ್ರವರಿಯಲ್ಲಿ ಮುಂದಿನ ಅಧಿವೇಶನದಲ್ಲಿ ವಿಧಾನ ಪರಿಷತ್ ನಲ್ಲಿಯೂ ಈ ಮಸೂದೆ ಅನುಮೋದನೆಗೆ ಸರ್ಕಾರ ಪ್ರಯತ್ನಿಸಲಿದೆ. ಕಾನೂನು ಜಾರಿಯಾದ ತಕ್ಷಣವೇ ವಿಶೇಷ ಕಾರ್ಯಪಡೆ ರಚಿಸಲಾಗುವುದು ಎಂದು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಬೊಮ್ಮಾಯಿ ತಿಳಿಸಿದ್ದಾರೆನ್ನಲಾಗಿದೆ.

ಇನ್ನೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಲಾಗುವುದು ಎಂದು ಸಿದ್ದರಾಮಯ್ಯನವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರ ಕನಸು ನನಸಾಗದು ಎಂದು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

‘ಲಸಿಕೆ ಹಾಕಿಸಲ್ಲ’ ಎಂದು ಮರ ಏರಿ ಕುಳಿತ ಯುವಕ: ವಿಡಿಯೋ ವೈರಲ್

ಕೊರೊನಾ ಸ್ಫೋಟ: ಎಸ್ಟೇಟ್ ಗಳಲ್ಲಿ ಕೆಲಸ ಮಾಡುತ್ತಿರುವ 23 ಮಂದಿಗೆ ಕೊವಿಡ್ ದೃಢ

ಪಕ್ಷ ಏನೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಬದ್ಧ ಎಂದ ಈಶ್ವರಪ್ಪ!

ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಲೈನ್ ಮ್ಯಾನ್!

ಕೊರಗ ಜನಾಂಗದ ಮೇಲೆ ಲಾಠಿ ಚಾರ್ಜ್ ನಡೆಸಿ ದೌರ್ಜನ್ಯ: ಕೋಟ ಠಾಣೆ ಪಿಎಸ್ ಐ ಸಂತೋಷ್ ಬಿ.ಪಿ. ಸಸ್ಪೆಂಡ್

ಇತ್ತೀಚಿನ ಸುದ್ದಿ