ಮತ್ತೊಂದು ವಿಮಾನ ದುರಂತ : ಪೈಲಟ್‌ ಸೇರಿ ಏಳು ಮಂದಿಯ ಸಾವು - Mahanayaka

ಮತ್ತೊಂದು ವಿಮಾನ ದುರಂತ : ಪೈಲಟ್‌ ಸೇರಿ ಏಳು ಮಂದಿಯ ಸಾವು

lemma
05/02/2022


Provided by

ಲಿಮಾ: ವಿಶ್ವ ಪಾರಂಪರಿಕ ತಾಣ ಪೆರು ದೇಶದ ನಾಜ್ಕಾ ರೇಖೆಗಳನ್ನು ನೋಡಲು ತೆರಳಿದ್ದ ವಿಮಾನವೊಂದು ಪತನವಾಗಿ ಏಳು ಮಂದಿ ಮೃತಪಟ್ಟ ಘಟನೆ ನಡೆದಿದೆ.

ಪ್ರವಾಸಿಗರನ್ನು ಹೊತ್ತ ಲಘು ವಿಮಾನ ಇದಾಗಿತ್ತು. ಏರೋ ಸ್ಯಾಂಟೋಸ್ ಎಂಬ ಟೂರ್ ಸಂಸ್ಥೆಯ ವಿಮಾನ ಇದಾಗಿದೆ.

ಐವರು ಪ್ರವಾಸಿಗರು, ಓರ್ವ ಪೈಲಟ್ ಮತ್ತು ಸಹ ಪೈಲಟ್ ಸೇರಿ ಏಳು ಜನ ಮೃತಪಟ್ಟಿದ್ದಾರೆ. ಪ್ರವಾಸಿಗರ ಗುರುತು ಮತ್ತು ದೇಶ ಪತ್ತೆ ಹಚ್ಚಲಾಗುತ್ತಿದೆ.

1500 ರಿಂದ 2000 ವರ್ಷಗಳ ಹಿಂದೆ ಪೆರುವಿನ ಮರಭೂಮಿಯ ಮೇಲೆ ಕಲ್ಪನಾ ರೇಖೆಗಳನ್ನು ಬಿಡಿಸಲಾಗಿದೆ. ಈ ತಾಣವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೆಂದು ಗುರುತಿಸಿದೆ. ಇದನ್ನು ನೋಡುವುದಕ್ಕಾಗಿ ವಿಮಾನ ಹೊರಟಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೇರಳದ ಡಾನ್ ಕೊಲೆ ಪ್ರಕರಣ: ಹಿಂಡಲಗಾ ಜೈಲಿನಲ್ಲಿ ಆರೋಪಿ ​ ಅನುಮಾನಾಸ್ಪದ ಸಾವು

ಗಾನಕೋಗಿಲೆ ಲತಾ ಮಂಗೇಶ್ಕರ್‌ ಸ್ಥಿತಿ ಗಂಭೀರ

ಯುವತಿಗೆ ಮೆಸೇಜ್​ ಮಾಡಿದ್ದಕ್ಕೆ ಯುವಕನ ಕೊಲೆಗೆ ಯತ್ನ: ನಾಲ್ವರು ಆರೋಪಿಗಳ ಬಂಧನ

ರಾಹುಲ್ ಗಾಂಧಿ ಪ್ರವಾಸಿ ರಾಜಕಾರಣಿ: ಸಿ.ಟಿ.ರವಿ ವ್ಯಂಗ್ಯ

ವಿಶೇಷಚೇತನ ಪುತ್ರನನ್ನು ಕೊಂದು ದಂಪತಿ ಆತ್ಮಹತ್ಯೆ

 

ಇತ್ತೀಚಿನ ಸುದ್ದಿ