ರೈಲ್ವೆ ಟ್ರಾಕ್ ಬಳಿ ಮಟ್ಕಾ ದಂಧೆ: ನಾಲ್ಕು ಮಂದಿ ಅರೆಸ್ಟ್ - Mahanayaka
12:54 PM Friday 5 - September 2025

ರೈಲ್ವೆ ಟ್ರಾಕ್ ಬಳಿ ಮಟ್ಕಾ ದಂಧೆ: ನಾಲ್ಕು ಮಂದಿ ಅರೆಸ್ಟ್

crime
07/11/2023


Provided by

ಮಂಗಳೂರಿನ ತೊಕ್ಕೊಟ್ಟು ಒಳಪೇಟೆಯ ರೈಲ್ವೆ ಟ್ರಾಕ್ ಬಳಿ ಮಟ್ಕಾ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ನಾಲ್ಕು ಮಂದಿಯನ್ನು ಉಳ್ಳಾಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಧುಸೂದನ್ (50), ಮುಸ್ತಫಾ (50), ಫಕೀರಪ್ಪ (38), ಖಾದಿರ್ ಮೊಯ್ದಿನ್ (65) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಮಟ್ಕಾ ಚೀಟಿ ಮತ್ತು 3,260 ರೂ.ವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರದ ಪೊಲೀಸ್ ಕಮಿಷನರ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಇತ್ತೀಚಿನ ಸುದ್ದಿ