ಮತ್ತಿನಲ್ಲಿ ಕಾಲೇಜು ಮುಂಭಾಗ ಬಿದ್ದ ಹೊರಳಾಡಿದ ವಿದ್ಯಾರ್ಥಿಗಳು: ವಿಡಿಯೋ ವೈರಲ್ - Mahanayaka

ಮತ್ತಿನಲ್ಲಿ ಕಾಲೇಜು ಮುಂಭಾಗ ಬಿದ್ದ ಹೊರಳಾಡಿದ ವಿದ್ಯಾರ್ಥಿಗಳು: ವಿಡಿಯೋ ವೈರಲ್

shivamogga
25/07/2022

ಶಿವಮೊಗ್ಗ: ಪ್ರತಿಷ್ಠಿತ ಕಾಲೇಜಿನ ಗೇಟ್ ಮುಂಭಾಗದ ಫುಟ್​ ಪಾತ್ ನಲ್ಲಿ ಅಮಲಿನಿಂದ ತೇಲಾಡುತ್ತಾ ವಿದ್ಯಾರ್ಥಿಗಳು ನೆಲದ ಮೇಲೆ ಹೊರಲಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗಿದೆ.

ಬಸ್​ನಲ್ಲಿ ಕುಳಿತ್ತಿದ್ದರುವರು ಪ್ರತಿಷ್ಠಿತ ಕಾಲೇಜಿನ ಗೇಟ್ ಮುಂಭಾಗದ ಫುಟ್​ಪಾತ್ ಮೇಲೆ ವಿದ್ಯಾರ್ಥಿಗಳಿ ಬಿದ್ದು ಹೊರಳಾಡುತ್ತಿರುವ 57 ಸೆಕೆಂಡ್​ನ ವಿಡಿಯೋ ಮಾಡಿದ್ದಾರೆ. ಓರ್ವ ವಿದ್ಯಾರ್ಥಿ ಅಮಲಿನಲ್ಲಿ ಮುಖ ಕೆಳಗೆ ಮಾಡಿ, ಫುಟ್ ಪಾತ್ ಮೇಲೆ ಬಿದ್ದಿದ್ದಾನೆ. ಇನ್ನೋರ್ವ ವಿದ್ಯಾರ್ಥಿ ಎರಡು ಹೆಜ್ಜೆ ಸಹ ಮುಂದೆ ನಡೆಯಲಾಗದೇ ಬೀಳುತ್ತಿದ್ದಾನೆ.

ಇತರ ಸ್ನೇಹಿತರು ಅವರನ್ನು ಸಂತೈಸಲು ಬಂದರೂ ಕೇಳದೇ  ಅಮಲಿನಲ್ಲಿ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಗಾಂಜಾ ಅಥವಾ ಮದ್ಯದ ಅಮಲಿನಲ್ಲಿ ವಿದ್ಯಾರ್ಥಿಗಳು ತೂರಾಡಿರುವ ಶಂಕೆ ವ್ಯಕ್ತವಾಗಿದ್ದು, ವಿದ್ಯಾರ್ಥಿಗಳು ಅಮಲಿನಲ್ಲಿ ತೂರಾಡುವ ವಿಡಿಯೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ