ಮತ್ತೊಂದು ಎಲೆಕ್ಟ್ರಿಕ್ ಬೈಕ್ ದುರಂತ: ಕಂಟೈನರ್ ನೊಳಗಿದ್ದ 20 ಬೈಕ್ ಗಳು ಸುಟ್ಟು ಭಸ್ಮ - Mahanayaka

ಮತ್ತೊಂದು ಎಲೆಕ್ಟ್ರಿಕ್ ಬೈಕ್ ದುರಂತ: ಕಂಟೈನರ್ ನೊಳಗಿದ್ದ 20 ಬೈಕ್ ಗಳು ಸುಟ್ಟು ಭಸ್ಮ

electric bike
12/04/2022


Provided by

ಮಹಾರಾಷ್ಟ್ರ: ದೇಶದಲ್ಲಿ ಎಲೆಕ್ಟ್ರಿಕ್ ಬೈಕುಗಳು ಹೆಚ್ಚು ಜನಪ್ರಿಯತೆ ಗಿಂತ ಅವುಗಳು ಬೆಂಕಿಗೆ ಆಹುತಿಯಾಗುತ್ತಿರುವ ಸುದ್ದಿಗಳೇ ಹೆಚ್ಚು ವರದಿಯಾಗುತ್ತಿದೆ. ಹೀಗಾಗಿ ಜನರಲ್ಲಿ ಇದರ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ.

ಜನರ ಆತಂಕದ ಮಧ್ಯೆ ಮತ್ತೊಂದು ದುರಂತ ನಡೆದಿದ್ದು, ಕಂಟೈನರ್ ಒಳಗಿದ್ದ 20 ಎಲೆಕ್ಟ್ರಿಕ್ ಬೈಕುಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ. ಮಹಾರಾಷ್ಟ್ರದ ನಾಸಿಕ್ ನಿಂದ ಬೆಂಗಳೂರಿಗೆ ಬೈಕ್ ಗಳನ್ನು ತರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ನಾಸಿಕ್ ನಲ್ಲಿರುವ ಜಿತೇಂದ್ರ ಎಲೆಕ್ಟ್ರಿಕ್ ವೆಹಿಕಲ್ಸ್ ಫ್ಯಾಕ್ಟರಿಯಿಂದ 40 ಎಲೆಕ್ಟ್ರಿಕ್ ಬೈಕುಗಳಿಂದ ಬೆಂಗಳೂರಿಗೆ ಕಂಟೇನರ್ ಮೂಲಕ ತರಲಾಗುತ್ತಿತ್ತು. ಮೇಲಿನ ಸಾಲಿನಲ್ಲಿ 20 ಹಾಗೂ ಕೆಳಗಿನ ಸಾಲಿನಲ್ಲಿ 20 ಬೈಕುಗಳು ಇದ್ದವು. ಈ ಪೈಕಿ ೨೦ ಬೈಕುಗಳು ಸುಟ್ಟು ಭಸ್ಮವಾಗಿವೆ.

ಕಂಟೈನರ್ ಹೊರಟ ಸ್ವಲ್ಪ ಹೊತ್ತಿನಲ್ಲೇ ಮೇಲಿನ ಸಾಲಿನಲ್ಲಿದ್ದ 20 ಬೈಕುಗಳಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಸುಟ್ಟು ಭಸ್ಮವಾಗಿವೆ. ಚಾಲಕನ ಸಮಯಪ್ರಜ್ಞೆಯಿಂದ ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಕಂಪನಿ ಹೇಳಿಕೊಂಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮುಚ್ಚಿದ ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳಿಗೆ ದೈವ ಗಳಿಂದಲೇ ಚಾಲನೆ

ಪತ್ನಿ ಹೆರಿಗೆ ಕೊಠಡಿಯಲ್ಲಿ, ಪತಿ ಬಾರ್ ನಲ್ಲಿ, ಮಗ ರಸ್ತೆಯಲ್ಲಿ | ಮನಕಲಕುವ ಘಟನೆ

ಒಟ್ಟಿಗೆ ಕಾಡಿಗೆ ತೆರಳಿದ್ದ 3 ಯುವತಿಯರ ಮೃತದೇಹ ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಸೈಕಲ್ ಕೊಡಿಸು ಎಂದು ಹಠ ಹಿಡಿದದ್ದಕ್ಕೆ ಮಗಳ ಮೇಲೆ ಕುದಿಯುವ ನೀರು ಎರಚಿದ ಪಾಪಿ!

ಕೆಲಸ ಕೊಡಿಸುವ ನೆಪದಲ್ಲಿ ಕರೆದೊಯ್ದು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಇತ್ತೀಚಿನ ಸುದ್ದಿ