" ಮಾಯದ ಮಾಯ್ಕಾರೆ ನಮ್ಮ ಕೊರಗಜ್ಜೆ"ತುಳು ಭಕ್ತಿ ಪ್ರಧಾನ ನಾಟಕ ಮುಹೂರ್ತ - Mahanayaka
11:25 PM Saturday 13 - September 2025

” ಮಾಯದ ಮಾಯ್ಕಾರೆ ನಮ್ಮ ಕೊರಗಜ್ಜೆ”ತುಳು ಭಕ್ತಿ ಪ್ರಧಾನ ನಾಟಕ ಮುಹೂರ್ತ

koragajja
04/10/2022

ಉಳ್ಳಾಲ: ರಂಗಭೂಮಿಯ ಹೆಸರಾಂತ ಕಲಾವಿದ ತುಳುನಾಡ ರತ್ನ ದಿನೇಶ್ ಅತ್ತಾವರ ರಚಿಸಿ, ನಿರ್ದೇಶಿಸಿರುವ ತುಳು ಭಕ್ತಿ ಪ್ರಧಾನ ನಾಟಕ ಮಾಯೊದ ಮಾಯ್ಕಾರೆ ನಮ್ಮ ಕೊರಗಜ್ಜೆ ಇದರ ಮುಹೂರ್ತ ಇತ್ತೀಚಿಗೆ ಕಲ್ಲಾಪು ಬುರ್ದುಗೋಳಿ ಕೊರಗಜ್ಜ ಗುಳಿಗ ಉದ್ಭವಶಿಲೆಯ ಆದಿಸ್ಥಳದಲ್ಲಿ ನಡೆಯಿತು.


Provided by

ಈ ವೇಳೆ ನಾಟಕ ರಚನೆಕಾರ ದಿನೇಶ್ ಅತ್ತಾವರ ಅತಿಥಿಗಳನ್ನು ಸ್ವಾಗತಿಸಿ, ಹೊಸ ನಾಟಕ “ಮಾಯಕೊದ ಮಾಯಕಾರೆ ನಮ್ಮ ಕೊರಗಜ್ಜ” ನಾಟಕದ ಸಂಪೂರ್ಣ ವಿವರಣೆ ನೀಡಿ ತುಳುನಾಡಿನ ಜನರ ಸಹಕಾರ ಬಯಸಿದರು.

ಈ ಸಂದರ್ಭದಲ್ಲಿ  ಕೊರಗಜ್ಜ ದೈವದ ನರ್ತನ ಸೇವಕರಾದ ಮಾಯಿಲ ಕುತ್ತಾರ್, ರಾಮ ಕಬಕ ಪುತ್ತೂರು, ಬುರ್ದುಗೋಳಿ ಕೊರಗಜ್ಜ ಕ್ಷೇತ್ರದ ಗೌರವಾಧ್ಯಕ್ಷ
ಸಂಜೀವ ಭಂಡಾರಿ, ಅಧ್ಯಕ್ಷ ವಿಶ್ವನಾಥ ನಾಯ್ಕ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕಾಯಂಗಳ, ಪುರುಷೋತ್ತಮ ಮೆಲಂಟ, ತೊಕ್ಕೊಟ್ಟು ಸಾಯಿ ಪರಿವಾರ್ ಟ್ರಸ್ಟ್ ನ ಪುರುಷೋತ್ತಮ ಕಲ್ಲಾಪು, ಪ್ರವೀಣ್ ಎಸ್. ಕುಂಪಲ, ಉಳ್ಳಾಲ ಧನ್ವಂತರಿ ವೈದ್ಯ ಶಾಲಾದ ಗಣೇಶ್ ಪಂಡಿತ್ ಮುಳಿಹಿತ್ಲು, ಓವರ್ ಬ್ರಿಡ್ಜ್ ಕೊರಗಜ್ಜ ಕಟ್ಟೆಯ ರಾಜೇಶ್ ಕಾಪಿಕಾಡ್, ಕೊರಗಜ್ಜ ಸೇವಾ ಸಮಿತಿ ಓವರ್ ಬ್ರಿಡ್ಜ್ ಇದರ ದೈವಾರಾದಕರೂ, ಮಧ್ಯಸ್ಥರು ಹಾಗೂ ಖ್ಯಾತ ನಿರೂಪಕರಾದ ರೋಹಿತ್ ಉಳ್ಳಾಲ್ , ದಲಿತ್ ಸೇವಾ ಸಮಿತಿ ಉಳ್ಳಾಲ ತಾಲೂಕು ಇದರ ಸಂಚಾಲಕ ಸೀತಾರಾಮ್ ಕಲ್ಲಾಪು ಹಾಗೂ ರಂಗಭೂಮಿ ಕಲಾವಿದರು ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ