ಅಂಗನವಾಡಿ ಕಟ್ಟಡ ಕಟ್ಟಲು ಜಾಗ ಹಸ್ತಾಂತರಿಸಲು ಮೀನಾ ಮೇಷ: ಅನಿರ್ದಿಷ್ಟ ಅವಧಿ ಮೌನ ಪ್ರತಿಭಟನೆ ಆರಂಭ - Mahanayaka
10:57 PM Monday 15 - September 2025

ಅಂಗನವಾಡಿ ಕಟ್ಟಡ ಕಟ್ಟಲು ಜಾಗ ಹಸ್ತಾಂತರಿಸಲು ಮೀನಾ ಮೇಷ: ಅನಿರ್ದಿಷ್ಟ ಅವಧಿ ಮೌನ ಪ್ರತಿಭಟನೆ ಆರಂಭ

kotigehara
22/09/2023

ಕೊಟ್ಟಿಗೆಹಾರ: ಅಂಗನವಾಡಿ ಕಟ್ಟಡ ಕಟ್ಟಲು ಜಾಗ ಹಸ್ತಾಂತರಿಸಲು ಮೀನಾ ಮೇಷ ಎಣಿಸುತ್ತಿರುವ ತಾಲೂಕು ಆಡಳಿತ ವಿರುದ್ಧ ಬಾಳೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ಹಾಗೂ ಗ್ರಾಮಸ್ಥರು ಬಾಳೂರಿನಲ್ಲಿ ಅನಿರ್ದಿಷ್ಟ ಅವಧಿ ಮುಷ್ಕರ ಪ್ರಾರಂಭಿಸಿದ್ದಾರೆ.


Provided by

ಮೂಡಿಗೆರೆ ತಾಲೂಕು ಬಾಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದರ್ಬಾರಪೇಟೆಯಲ್ಲಿ ಅಂಗನವಾಡಿ ಕಟ್ಟಡ ಕಟ್ಟಲು ಗ್ರಾಮ ಪಂಚಾಯಿತಿಯಿಂದ ಹಣ ಮಂಜೂರು ಆಗಿದ್ದು, ಕಟ್ಟಡ ಕಟ್ಟಲು ಜಾಗ ಸಹ ಗುರುತಿಸಿದ್ದು, ಆ ಜಾಗವನ್ನು ಖಾಸಗಿ ವ್ಯಕ್ತಿ ಒಬ್ಬರು ಬೇಲಿ ನಿರ್ಮಾಣ ಮಾಡಿದ್ದರಿಂದ ಅಂಗನವಾಡಿ ಕಟ್ಟಡವನ್ನು ಕಟ್ಟಲು ಸಾಧ್ಯವಾಗುತ್ತಿಲ್ಲವೆಂದು ಆರೋಪಿಸಿ ಬಾಳೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ಗ್ರಾಮಸ್ಥರು ಇಂದು ಅನಿರ್ದಿಷ್ಟ ಅವಧಿ ಮೌನ ಪ್ರತಿಭಟನೆ ಆರಂಭಿಸಿದ್ದಾರೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಬಾಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ್, ಮೂಡಿಗೆರೆ ತಾಲೂಕು ದಂಡಾಧಿಕಾರಿಗಳು ಅಂಗನವಾಡಿಗೆ ಜಾಗ ಬಿಡಿಸಿ ಕೊಡುವವರೆಗೂ ಅನಿರ್ದಿಷ್ಟ ಅವಧಿ ಮೌನ ಪ್ರತಿಭಟನೆ ಮಾಡುತ್ತೇವೆ ಎಂದರು.

ಇತ್ತೀಚಿನ ಸುದ್ದಿ