ಅಕ್ರಮ ನಿರ್ಮಾಣದ ನೆಪದಲ್ಲಿ ಮೀನುಗಾರರ ಶೆಡ್ ಉರುಳಿಸಿದ ನಗರಸಭೆ - Mahanayaka
10:12 PM Thursday 21 - August 2025

ಅಕ್ರಮ ನಿರ್ಮಾಣದ ನೆಪದಲ್ಲಿ ಮೀನುಗಾರರ ಶೆಡ್ ಉರುಳಿಸಿದ ನಗರಸಭೆ

udupi news
26/08/2022


Provided by

ಉಡುಪಿ:  ಅಕ್ರಮ ನಿರ್ಮಾಣದ ನೆಪದಲ್ಲಿ ನಗರ ಸಭೆ ಬಡ ಮೀನುಗಾರರ ಶೆಡ್ ಉರುಳಿಸಿದ ಅಮಾನವೀಯ ಘಟನೆ ನಡೆದಿದ್ದು, ಘಟನೆ ವಿರುದ್ಧ ರೊಚ್ಚಿಗೆದ್ದ ಜನ ಸ್ಥಳದಲ್ಲಿ ತೀವ್ರ ಪ್ರತಿಭಟನೆ ನಡೆದಿದ್ದಾರೆ.

ನಗರದ ಸ್ವಾಗತ ಗೋಪುರ ಬಳಿ ನಿರ್ಮಿಸುತ್ತಿದ್ದ ನಿರ್ಮಾಣ ಹಂತದಲ್ಲಿದ್ದ ಮೀನು ಮಾರಾಟ ಶೆಡ್ ನ್ನು ಜೆಸಿಬಿ ಬಳಸಿ ನೆಲಕ್ಕುರುಳಿಸಲಾಗಿದೆ.  40 ವರ್ಷಗಳಿಂದ ಇಲ್ಲಿ ಮೀನು ಮಾರುವ ಮಹಿಳೆಯರ ಅನುಕೂಲಕ್ಕೆ ಶೆಡ್ ನಿರ್ಮಿಸಲಾಗಿತ್ತು.

ಸ್ಥಳೀಯ ನಗರಸಭಾ ಸದಸ್ಯೆ ಅಮೃತ ಕೃಷ್ಣಮೂರ್ತಿ ಸ್ವಂತ ಖರ್ಚಿನಲ್ಲಿ ಶೆಡ್ ನಿರ್ಮಿಸಿದ್ದರು.  ನಿರ್ಮಾಣ ಹಂತದಲ್ಲಿರುವಾಗಲೇ ನಗರಸಭೆ ಜೆಸಿಬಿ ಬಳಸಿ ಶೆಡ್ ಕೆಡವಿ  ಹಾಕಿದೆ.

ನಗರ ಸಭೆಯ ನಡೆಯ ವಿರುದ್ಧ ಸ್ಥಳೀಯರು ಹಾಗೂ ರಿಕ್ಷಾ ಚಾಲಕರ  ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ನಗರದ ಪ್ರತಿಷ್ಠಿತ ಕಟ್ಟಡಗಳಿಗೆ ಇಲ್ಲದ ಕಾನೂನು ನಮ್ಮ ಮೇಲೆ ಹೇರಲಾಗುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ನೋಟಿಸ್ ನೀಡದೆ ಶೆಡ್ ತೆರವು ಮಾಡಲಾಗಿದೆ.  ದಶಕಗಳಿಂದ ಬೇಡಿಕೆ ಇಟ್ಟರೂ ನಗರಸಭೆ ಮೀನುಗಾರರಿಗೆ ವ್ಯವಸ್ಥೆ ಕಲ್ಪಿಸಿರಲಿಲ್ಲ.  ಹಾಗಾಗಿ ತಾತ್ಕಾಲಿಕ ನೆಲೆಯಲ್ಲಿ ಶೆಡ್ ನಿರ್ಮಾಣಕ್ಕೆ ಮುಂದಾಗಿದ್ದ ನಗರಸಭಾ ಸದಸ್ಯೆ,  ಕಟ್ಟಡ ಸಾಮಗ್ರಿಗಳನ್ನು ಬಳಸಿಕೊಳ್ಳಲು ಅವಕಾಶವಿಲ್ಲದಂತೆ ಶೆಡ್ ಕೆಡವಿ ಹಾಕಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ