ಮೆಗಿ ಚಂಡಮಾರುತಕ್ಕೆ  167 ಮಂದಿ ಬಲಿ: 110 ಮಂದಿ ನಾಪತ್ತೆ - Mahanayaka
11:06 AM Wednesday 15 - October 2025

ಮೆಗಿ ಚಂಡಮಾರುತಕ್ಕೆ  167 ಮಂದಿ ಬಲಿ: 110 ಮಂದಿ ನಾಪತ್ತೆ

megi
16/04/2022

ಮನಿಲಾ: ಫಿಲಿಪೈನ್ಸ್‌ ನಲ್ಲಿ ಬೀಸುತ್ತಿರುವ  ಚಂಡಮಾರುತ ಮೆಗಿ(Megi)ಯಿಂದ ಉಂಟಾದ  ಪ್ರವಾಹ  ಮತ್ತು ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 167 ಕ್ಕೆ ಏರಿದ್ದು, 110 ಮಂದಿ ಕಾಣೆಯಾಗಿದ್ದಾರೆ.


Provided by

ಏ.10 ರಂದು ಅಪ್ಪಳಿಸಿತದ ಚಂಡಮಾರುತದಿಂದ ಅನೇಕ ತಗ್ಗು ಪ್ರದೇಶ ಪ್ರದೇಶಗಳು ಮುಳುಗಿದೆ. ಬೇಬೇ ಸಿಟಿ ಮತ್ತು ಲೇಯ್ಟ್ ಪ್ರಾಂತ್ಯದ ಅಬುಯೋಗ್ ಪಟ್ಟಣದ ಹಲವಾರು ಹಳ್ಳಿಗಳಲ್ಲಿ ಭೂಕುಸಿತ ಕೂಡ ಉಂಟಾಗಿದೆ.

ರಾಷ್ಟ್ರೀಯ ವಿಪತ್ತು ಅಪಾಯ ನಿರ್ವಹಣಾ ಮಂಡಳಿಯ ಪ್ರಕಾರ  ಮಧ್ಯೆ  ಫಿಲಿಪೈನ್ಸ್‌ ನಲ್ಲಿ 164 ಮತ್ತು ದಕ್ಷಿಣ ಫಿಲಿಪೈನ್ಸ್‌ ನಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದೆ.

ವಿಪತ್ತುಗಳಿಂದ ಪ್ರಭಾವಿತವಾಗಿರುವ ಪ್ರಾಂತ್ಯಗಳ ವರದಿಗಳನ್ನು ಸಂಗ್ರಹಿಸುವ ಸಂಸ್ಥೆ, ಮಧ್ಯ ಫಿಲಿಪೈನ್ಸ್‌ನಲ್ಲಿ ಇನ್ನೂ 110 ಮಂದಿ ಕಾಣೆಯಾಗಿದ್ದಾರೆ ಎಂದು ವರದಿ ಮಾಡಿದೆ.

ಶುಕ್ರವಾರ, ಫಿಲಿಪೈನ್ಸ್ ಅಧ್ಯಕ್ಷ ರೋಡ್ರಿಗೋ ಡ್ಯುಟರ್ಟೆ ಪ್ರವಾಹ  ಗ್ರಾಮಗಳ ವೈಮಾನಿಕ ಪರಿಶೀಲನೆ ನಡೆಸಿದರು. ಮಳೆಗಾಲದಲ್ಲಿ ವಿಶೇಷವಾಗಿ ಟೈಫೂನ್‌ ಗಳು ಅಪ್ಪಳಿಸಿದಾಗ ಫಿಲಿಪೈನ್ಸ್‌ ನಾದ್ಯಂತ ಭೂಕುಸಿತಗಳು ಮತ್ತು ಹಠಾತ್ ಪ್ರವಾಹಗಳು ಸಾಮಾನ್ಯವಾಗಿದೆ.

ಫಿಲಿಪೈನ್ಸ್ ವಿಶ್ವದ ಅತ್ಯಂತ ವಿಪತ್ತು ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದೆ. ಮುಖ್ಯವಾಗಿ ಪೆಸಿಫಿಕ್  ರಿಂಗ್ ಆಫ್ ಫೈರ್ ಮತ್ತು ಪೆಸಿಫಿಕ್ ಟೈಫೂನ್ ಬೆಲ್ಟ್‌ ನಲ್ಲಿರುವ ಸ್ಥಳದಿಂದಾಗಿ ಸರಾಸರಿಯಾಗಿ, ಈ ದ್ವೀಪಸಮೂಹ ದೇಶವು ಪ್ರತಿ ವರ್ಷ 20 ಟೈಫೂನ್‌ ಗಳನ್ನು ಅನುಭವಿಸುತ್ತದೆ.

ಅವುಗಳಲ್ಲಿ ಕೆಲವು ತೀವ್ರ ಮತ್ತು ವಿನಾಶಕಾರಿಯಾಗಿದೆ. ಮೆಗಿ ಈ ವರ್ಷ ಆಗ್ನೇಯ ಏಷ್ಯಾದ ದೇಶಕ್ಕೆ  ಹೊಡೆದ ಮೊದಲ ಚಂಡಮಾರುತವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಭಾರೀ ಚಿನ್ನದ ಬೇಟೆ:  ಒಂದೂವರೆ ಕೋಟಿ ಚಿನ್ನ  ವಶ

ಸಂತೋಷ್ ಪಾಟೀಲ್ ಮೊಬೈಲ್ ನಲ್ಲಿತ್ತು 88 ಮಿಸ್ಡ್ ಕಾಲ್?

ಅಸಭ್ಯ ವರ್ತನೆ: ಉಪನ್ಯಾಸಕನಿಗೆ ಸ್ಟಾಪ್  ರೂಮ್ ನಲ್ಲಿ ಹಿಗ್ಗಾಮುಗ್ಗಾ ಥಳಿತ!

ಎಸ್ಸಿ-ಎಸ್ಟಿ ಮಕ್ಕಳಿಗೆ ನೀಡುವ ಹಾಸಿಗೆ, ದಿಂಬುಗಳಲ್ಲಿಯೂ ಕಾಂಗ್ರೆಸ್ ಭ್ರಷ್ಟಾಚಾರ ಮಾಡಿದೆ | ಬೊಮ್ಮಾಯಿ ವಾಗ್ದಾಳಿ

ಊಟವಾದ ತಕ್ಷಣ ಕೋಲ್ಡ್ ವಾಟರ್ ಕುಡಿಯ ಬಾರದು ಯಾಕೆ ಗೊತ್ತಾ?

 

ಇತ್ತೀಚಿನ ಸುದ್ದಿ