ಮೇಲಾಧಿಕಾರಿಗಳ ಹೆಸರು ಬರೆದಿಟ್ಟು ಅಂಗನವಾಡಿ ಕಾರ್ಯಕರ್ತೆ ಆತ್ಮಹತ್ಯೆಗೆ ಯತ್ನ - Mahanayaka

ಮೇಲಾಧಿಕಾರಿಗಳ ಹೆಸರು ಬರೆದಿಟ್ಟು ಅಂಗನವಾಡಿ ಕಾರ್ಯಕರ್ತೆ ಆತ್ಮಹತ್ಯೆಗೆ ಯತ್ನ

deathnote
17/02/2022


Provided by

ಮೈಸೂರು: ಮೈಸೂರು ಸಿಡಿಪಿಓ, ಎಸ್ ಓಪಿ, ಡಿಡಿ ಹೆಸರು ಬರೆದಿಟ್ಟು ಅಂಗನವಾಡಿ ಕಾರ್ಯಕರ್ತೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರು ತಾಲೂಕಿನ ದೊಡ್ಡ ಮಾರಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸುಮತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಅಂಗನವಾಡಿ ಕಾರ್ಯಕರ್ತೆ. ಇವರು ಸಿಡಿಪಿಓ ಮಂಜುಳಾ ಪಾಟೀಲ್, ಎಸ್ ಓಪಿ ಪಾರ್ವತಿ ನಾಯ್ಕ್, ಡಿಡಿ ಬಸವರಾಜು ವಿರುದ್ಧ ಗಂಭೀರ ಆರೋಪ ಮಾಡಿ ವಿಷ ಸೇವಿಸಿದ್ದಾರೆ.

ಅಸ್ವಸ್ಥರಾಗಿರುವ ಸುಮತಿ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿರುವ ಸುಮತಿ ಅವರಿಗೆ ಅಧಿಕಾರಿಗಳು ಮಾನಸಿಕವಾಗಿ ತೊಂದರೆ ನೀಡಿದ್ದಾರೆ. ಇಂತಹ ಘಟನೆ ಬೇರೆ ಎಲ್ಲಿಯೂ ನಡೆಯಬಾರದು. ಈ ಅಧಿಕಾರಿಗಳನ್ನು‌ ಕೂಡಲೆ ಸರ್ಕಾರ ವರ್ಗಾವಣೆ ಮಾಡಲಿ. ಇಲ್ಲವಾದರೆ ನಾವು ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ‌ ಎಂದು ದೊಡ್ಡಮಾರಗೌಡನಹಳ್ಳಿ ಗ್ರಾಮಸ್ಥರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಾಷ್ಟ್ರಧ್ವಜದ ಬಗ್ಗೆ ವಿವಾದಾತ್ಮಕ ಹೇಳಿಕೆ: ಸಚಿವ ಈಶ್ವರಪ್ಪ ಒಬ್ಬ ಅವಿವೇಕಿ; ಮನೋಹರ್‌

ಫೆ. 19ರಂದು ಬಳ್ಳಾಜೆ-ಕೊಳವೂರು ಶ್ರೀ ಸತ್ಯಸಾರಮಾನಿ ದೈವಸ್ಥಾನದ ವಾರ್ಷಿಕ ನೇಮೋತ್ಸವ

ಆಫ್‍ಲೈನ್ ತರಗತಿಗೆ ಹೋಗುವಂತೆ ಪೋಷಕರು ಒತ್ತಾಯಿಸಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

ಜಾಗಟೆ, ಗಂಟೆಯಿಂದ ಶಬ್ದ ಮಾಲಿನ್ಯ: ಆದೇಶ ವಾಪಸ್ ಪಡೆಯಲಾಗಿದೆ | ಅರಗ ಜ್ಞಾನೇಂದ್ರ 

ಇತ್ತೀಚಿನ ಸುದ್ದಿ