ಋತುಮತಿಯಾದ ವಿದ್ಯಾರ್ಥಿನಿಯನ್ನು ತರಗತಿಯಿಂದ ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ ಪ್ರಾಂಶುಪಾಲ! - Mahanayaka

ಋತುಮತಿಯಾದ ವಿದ್ಯಾರ್ಥಿನಿಯನ್ನು ತರಗತಿಯಿಂದ ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ ಪ್ರಾಂಶುಪಾಲ!

menstruating student
10/04/2025


Provided by

ಕೊಯಮತ್ತೂರು: ಋತುಮತಿಯಾದ 8 ನೇ ತರಗತಿ ವಿದ್ಯಾರ್ಥಿನಿಯನ್ನು ಪ್ರಾಂಶುಪಾಲ ತರಗತಿಯ ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ ಅಮಾನವೀಯ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

ಪ್ರಾಂಶುಪಾಲನ ಮನುವಾದೀಯ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸೆಂಗುಟ್ಟೈನಲ್ಲಿರುವ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಋತುಚಕ್ರದಲ್ಲಿದ್ದ ವಿದ್ಯಾರ್ಥಿನಿಯನ್ನು ತರಗತಿಯ ಹೊರಗೆ ಕುಳಿತು ಪರೀಕ್ಷೆ ಬರೆಯುವಂತೆ ಪ್ರಾಂಶುಪಾಲ ಸೂಚಿಸಿದ್ದು, ಹೀಗಾಗಿ ವಿದ್ಯಾರ್ಥಿನಿ ತರಗತಿಯ ಹೊರಗೆ ಕುಳಿತು ಪರೀಕ್ಷೆ ಬರೆದಿದ್ದಾಳೆ.

ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ವಿದ್ಯಾರ್ಥಿನಿಯ ತಾಯಿ, ಬಾಲಕಿಯ ಬಳಿ ಏನಾಯ್ತು ಎಂದು ಕೇಳಿದ್ದು, ಈ ವೇಳೆ ಪ್ರಾಂಶುಪಾಲರು ನನ್ನನ್ನು ಹೊರಗೆ ಕೂರಿಸಿದ್ದಾರೆ ಎಂದು ವಿದ್ಯಾರ್ಥಿನಿ ತನ್ನ ತಾಯಿಗೆ ಹೇಳಿದ್ದಾಳೆ.

ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿನಿಯ ತಾಯಿ ಮುಟ್ಟಿನ ಸಮಯದಲ್ಲಿ ತನ್ನ ಮಗಳನ್ನು  ಹೊರಗೆ ಕೂರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ವಿಜ್ಞಾನ ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿನಿಯನ್ನು ಮುಟ್ಟಿನ ಕಾರಣಕ್ಕೆ ಹೊರ ಕೂರಿಸಲಾಯಿತು. ಈ ಸಂಬಂಧ  ಇದೀಗ ವಿಡಿಯೋ ವೈರಲ್ ಆಗಿದ್ದು ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದಲ್ಲೂ ನಡೆದಿತ್ತೊಂದು ಪ್ರಕರಣ:

ಈ ವರ್ಷದ ಜನವರಿಯಲ್ಲಿ, ಉತ್ತರ ಪ್ರದೇಶದ ಬಾಲಕಿಯರ ಶಾಲೆಯ 11 ನೇ ತರಗತಿಯ ವಿದ್ಯಾರ್ಥಿನಿ ಶನಿವಾರ ಪರೀಕ್ಷೆ ಬರೆಯುವಾಗ ಸ್ಯಾನಿಟರಿ ನ್ಯಾಪ್ಕಿನ್ ಕೇಳಿದ ನಂತರ, ಆಕೆಯನ್ನು ಒಂದು ಗಂಟೆ ತರಗತಿಯಿಂದ ಹೊರಹೋಗುವಂತೆ  ಹೇಳಲಾಗಿತ್ತು. ಈ ಬಗ್ಗೆ ಬಾಲಕಿಯ ತಂದೆ ದೂರು ನೀಡಿದ್ದರು. ತನ್ನ ಮಗಳು ಪರೀಕ್ಷೆಗೆ ಶಾಲೆಯಲ್ಲಿದ್ದಾಗ ತನ್ನ ಋತುಚಕ್ರವಾಗಿತ್ತು. ಪ್ರಾಂಶುಪಾಲರಿಗೆ ಸ್ಯಾನಿಟರಿ ಪ್ಯಾಡ್ ಕೇಳಿದ ನಂತರ, ಆಕೆಯನ್ನು ತರಗತಿಯಿಂದ ಹೊರಗೆ ನಿಲ್ಲುವಂತೆ ಒತ್ತಾಯಿಸಲಾಗಿತ್ತು. ಎಂದು ದೂರಿನಲ್ಲಿ ಅವರು ತಿಳಿಸಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ