ಕೆನಡಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಬಂದ್ ಮಾಡಿ: ಉಗ್ರ ಸಂಘಟನೆಯಿಂದ ಬೆದರಿಕೆ ಕರೆ..! - Mahanayaka
11:08 PM Friday 19 - December 2025

ಕೆನಡಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಬಂದ್ ಮಾಡಿ: ಉಗ್ರ ಸಂಘಟನೆಯಿಂದ ಬೆದರಿಕೆ ಕರೆ..!

12/09/2023

ಕೆನಡಾದ ಒಟ್ಟಾವಾದಲ್ಲಿರುವ ಭಾರತೀಯ ಹೈಕಮಿಷನ್ ಅನ್ನು ಮುಚ್ಚುವಂತೆ ಒತ್ತಾಯಿಸಿ ಕೆನಡಾದ ಉಗ್ರಗಾಮಿ ಗುಂಪೊಂದು ಭಾರತಕ್ಕೆ ಬೆದರಿಕೆ ಕರೆ ಮಾಡಿದೆ. ಜಿ-20 ಶೃಂಗಸಭೆ 2023 ರಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಎರಡು ದಿನಗಳ ನಂತರ ಈ ಕರೆ ಬಂದಿದೆ.

ನ್ಯೂಸ್ 18 ವರದಿಯ ಪ್ರಕಾರ, ಭಾರತೀಯ ಹೈಕಮಿಷನ್ ಅನ್ನು ಮುಚ್ಚಲು ಮತ್ತು ಭಾರತೀಯ ಹೈಕಮಿಷನ್ ಸಂಜಯ್ ಕುಮಾರ್ ವರ್ಮಾ ಅವರನ್ನು ನವದೆಹಲಿಗೆ ವಾಪಸ್ ಕರೆಸಿಕೊಳ್ಳಿ ಎಂದು ಮಾಡಿದ ಎರಡನೇ ಬೆದರಿಕೆ ಕರೆ ಇದಾಗಿದೆ.

ಇತ್ತ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಅವರ ಅಧಿಕೃತ ವಿಮಾನದಲ್ಲಿ ತಾಂತ್ರಿಕ ದೋಷದಿಂದಾಗಿ ಪ್ರಸ್ತುತ ಭಾರತದಲ್ಲಿ ಬಾಕಿಯಾಗಿದ್ದಾರೆ. ಪ್ರಧಾನಿ ಕಚೇರಿಯ ಪ್ರಕಾರ, ಕೆನಡಾದ ನಿಯೋಗವನ್ನು ಸ್ವೀಕರಿಸಲು ಮತ್ತು ಅವರನ್ನು ಒಟ್ಟಾವಾಗೆ ಕರೆದೊಯ್ಯಲು ಮೀಸಲು ವಿಮಾನವನ್ನು ಕಳುಹಿಸಲಾಗಿದೆ.

ಇತ್ತೀಚಿನ ಸುದ್ದಿ