ಟೊಮೇಟೋ ಕಳವು : ರಾತ್ರೋ ರಾತ್ರಿ ರೈತನ ಜಮೀನಿಗೆ ನುಗ್ಗಿದ ಕಳ್ಳರು: ಲಕ್ಷಾಂತರ ರೂ. ಮೌಲ್ಯದ ಟೊಮೇಟೋ ಕಳ್ಳರ ಪಾಲು - Mahanayaka
3:03 AM Thursday 29 - January 2026

ಟೊಮೇಟೋ ಕಳವು : ರಾತ್ರೋ ರಾತ್ರಿ ರೈತನ ಜಮೀನಿಗೆ ನುಗ್ಗಿದ ಕಳ್ಳರು: ಲಕ್ಷಾಂತರ ರೂ. ಮೌಲ್ಯದ ಟೊಮೇಟೋ ಕಳ್ಳರ ಪಾಲು

tomato
05/07/2023

ಹಾಸನ: ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿಯಲ್ಲಿ ಕಳ್ಳರು ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಮೌಲ್ಯದ ಟೊಮೇಟೋ ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಗ್ರಾಮದ ಧರಣಿ ಎಂಬವರ ಜಮೀನಿನಲ್ಲಿ ಬೆಳೆದಿದ್ದ ಟೊಮೇಟೋ ಬೆಳೆ ಉತ್ತಮ ಇಳುವರಿಯಾಗಿತ್ತು. ಆದ್ರೆ ಬೆಳೆದ ಬೆಳೆ ಕೈಗೆ ಸಿಗುವುದಕ್ಕೂ ಮೊದಲು ಕಳ್ಳರ ಪಾಲಾಗಿದೆ.

ಕಳೆದ ರಾತ್ರಿ ಜಮೀನಿಗೆ ನುಗ್ಗಿರುವ ಕಳ್ಳರು ಸುಮಾರು 50ರಿಂದ 60 ಬ್ಯಾಗ್ ನಷ್ಟು ಟೊಮೆಟೋಗಳನ್ನು ಕಳವು ಮಾಡಿದ್ದು, ಇದರ ಈಗಿನ ಬೆಲೆ ಅಂದಾಜು ಒಂದೂವರೆ ಲಕ್ಷಕ್ಕೂ ಅಧಿಕವಾಗಿದೆ.

ಬೆಳಗ್ಗೆ ಧರಣಿ ಅವರು ತಮ್ಮ ಜಮೀನಿಗೆ ಹೋದಾಗ ಕಳವು ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಕಷ್ಟಪಟ್ಟು ಬೆಳೆದಿದ್ದ ಟೊಮೆಟೋ ಉತ್ತಮ ಬೆಲೆ ಇರುವ ಸಂದರ್ಭದಲ್ಲೇ  ಕಳ್ಳರ ಪಾಲಾಗಿರುವ ಹಿನ್ನೆಲೆಯಲ್ಲಿ ರೈತ ಧರಣಿ ಕಂಗಾಲಾಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ