ಆಟೋ ಚಲಾಯಿಸಿ ಅಪ್ರಾಪ್ತ ಬಾಲಕ: ಅಪಘಾತದಲ್ಲಿ ವ್ಯಕ್ತಿ ಸಾವು: ತಂದೆಗೆ 1.41 ಕೋಟಿ ದಂಡ

ಕೊಪ್ಪಳ: ಆಟೋ ಚಾಲಕನ ಅಪ್ರಾಪ್ತ ಮಗ ಆಟೋ ಚಲಾಯಿಸುತ್ತಿದ್ದ ವೇಲೆ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಈ ಪ್ರಕರಣದಲ್ಲಿ ಆಟೋ ಮಾಲಿಕನಿಗೆ ಕೊಪ್ಪಳ ನ್ಯಾಯಾಲಯವು 1.41 ಕೋಟಿ ರೂ.ಗಳ ಭಾರಿ ದಂಡ ವಿಧಿಸಿದೆ.
ಮಾರ್ಚ್ 10, 2021 ರಂದು ಗಂಗಾವತಿಯಲ್ಲಿ ಈ ಘಟನೆ ನಡೆದಿತ್ತು. ಕೊಪ್ಪಳ ಜಿಲ್ಲೆಯ ಗಂಗಾವತಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮಂಗಳವಾರ ನ್ಯಾಯಾಧೀಶ ರಮೇಶ್ ಎಸ್. ಗಾಣಿಗೇರ್ ವಿಚಾರಣೆ ನಡೆಸಿದರು. ಪ್ರಕರಣದ ವಿಚಾರಣೆ ನಡೆಸಿದ ನಂತರ, ನ್ಯಾಯಾಧೀಶರು ಮೃತರ ಕುಟುಂಬಕ್ಕೆ ಹಣ ಪಾವತಿಸಲು ಆದೇಶಿಸಿದ್ದಾರೆ.
ಗಂಗಾವತಿಯ ಜಯನಗರ ನಿವಾಸಿ, ದ್ವಿಚಕ್ರ ವಾಹನ ಸವಾರ ಮೃತ ರಾಜಶೇಖರ್ ಅಯ್ಯನಗೌಡ ಅವರ ಕುಟುಂಬವು ತಾಲ್ಲೂಕು ಕಾನೂನು ಸೇವೆಗಳ ಸಮಿತಿಗೆ ದೂರು ಸಲ್ಲಿಸಿತು. ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಆಟೋ ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಮೃತರ ಪತ್ನಿ ಚೆನ್ನಮ್ಮ ಮತ್ತು ಇತರರು ಪರಿಹಾರ ಕೋರಿ ನ್ಯಾಯಾಲಯದ ಮೊರೆ ಹೋದರು.
2021ರಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಲ್ಲಿಸಲಾದ ದೂರನ್ನು ಆಲಿಸಿದ ನಂತರ, ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ರಮೇಶ್ ಎಸ್. ಗಾಣಿಗೇರ್ ಅವರು, ಆಟೋ ಡ್ರೈವರ್‌ಗೆ ಮೃತರ ಕುಟುಂಬಕ್ಕೆ 1,41,61,580 ರೂ. ಪರಿಹಾರವನ್ನು ನೀಡುವಂತೆ ಆದೇಶಿಸಿದರು.
ರಾಜಶೇಖರ್ ಅಯ್ಯನಗೌಡ ಅವರು ಯೆಲ್ಬುರ್ಗಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ಕರ್ತವ್ಯ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ, ರಾಜಶೇಖರ್ ಪಟ್ಟಣದ ಅಂಗಡಿಯ ಬಳಿ ತನ್ನ ಬೈಕನ್ನು ನಿಲ್ಲಿಸಿ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಿದ್ದಾಗ, ಅಪ್ರಾಪ್ತ ಮಹಾಂತೇಶ್ ಕುದರಿಕೋಟಗಿ, ರಾಜಶೇಖರ್‌ಗೆ ಆಟೋ ಡಿಕ್ಕಿ ಹೊಡೆಸಿದ್ದ ಈ ವೇಳೆ ಅವರು ಗಂಭೀರವಾಗಿ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: