ವಿದೇಶಿ ಪ್ರಜೆಯ ಹಣ ದೋಚಿದ ದುಷ್ಕರ್ಮಿಗಳು - Mahanayaka
5:08 AM Thursday 20 - November 2025

ವಿದೇಶಿ ಪ್ರಜೆಯ ಹಣ ದೋಚಿದ ದುಷ್ಕರ್ಮಿಗಳು

money
03/05/2023

ಬೆಂಗಳೂರು: ತಾವು ಪೊಲೀಸರೆಂದು ಹೇಳಿ, ಯಾಮಾರಿಸಿ ವಿದೇಶಿ ಪ್ರಜೆಯ 4 ಲಕ್ಷ ರೂ. ಮೌಲ್ಯದ ಹಣವನ್ನು ದುಷ್ಕರ್ಮಿಗಳು ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದ ಯೆಮನ್ ದೇಶದ ಪ್ರಜೆ ಗೇದ್ ಸೈಫ್ ಮೋಕ್ಬೆಲ್ ಅವರ ಹಣವನ್ನು ದುಷ್ಕರ್ಮಿಗಳು ದೋಚಿದ್ದಾರೆ. ಮೋಕ್ಬೆಲ್ ಕಮ್ಮನಹಳ್ಳಿಯ ಎಂಪೈರ್ ಹೋಟೆಲಿಗೆ ಹೋಗುತ್ತಿದ್ದ ಸಂದರ್ಭ ಕಾರನ್ನು ತಡೆದ ಅಪರಿಚಿತರು ನಾವು ಪೊಲೀಸರು, ಕಾರನ್ನು ಪರಿಶೀಲಿಸಬೇಕೆಂದು ಹೇಳಿದ್ದಾರೆ.

ಆರೋಪಿಗಳು ಬಿಳಿ ಬಣ್ಣದ ಕಾರಿನಲ್ಲಿ ಬಂದಿದ್ದು, ವಿದೇಶಿ ವ್ಯಕ್ತಿಯ ಕಾರನ್ನು ಪರಿಶೀಲಿಸಿದ್ದಾರೆ. ಬಳಿಕ ಆತನ ಪಾಕೇಟ್‌ನಲ್ಲಿದ್ದ 5,000 ಅಮೆರಿಕನ್ ಡಾಲರ್ (ಸುಮಾರು 4 ಲಕ್ಷ ರೂ.) ಅನ್ನು ದೋಚಿ ಪರಾರಿಯಾಗಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ