ಪರಿಶಿಷ್ಟರ ಅನುದಾನ ದುರ್ಬಳಕೆ, ರಾಜ್ಯ ಕಾಂಗ್ರೆಸ್ ಸರ್ಕಾರದ ನಯವಂಚನೆ: ದಲಿತ ವಿದ್ಯಾರ್ಥಿ ಪರಿಷತ್ ಕಿಡಿ - Mahanayaka
2:34 PM Wednesday 27 - August 2025

ಪರಿಶಿಷ್ಟರ ಅನುದಾನ ದುರ್ಬಳಕೆ, ರಾಜ್ಯ ಕಾಂಗ್ರೆಸ್ ಸರ್ಕಾರದ ನಯವಂಚನೆ: ದಲಿತ ವಿದ್ಯಾರ್ಥಿ ಪರಿಷತ್ ಕಿಡಿ

sandeep
18/07/2024


Provided by

ಬೀದರ್: ಪರಿಶಿಷ್ಟರ  ಬಗ್ಗೆ ಕಾಳಜಿ ಇರುವಂತೆ ಮಾತನಾಡಿ, ಅವರ ಅಭಿವೃದ್ಧಿ ನಮ್ಮನ್ನ ಹೊರತು ಬೇರೆಯರಿಂದ ಸಾಧ್ಯವಿಲ್ಲ ಎನ್ನುವಂತೆ ವರ್ತಿಸಿ, ಮತಗಳನ್ನು ಪಡೆದು ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರವು  ಇದೀಗ ಪರಿಶಿಷ್ಟ ಸಮುದಾಯಕ್ಕೆ ಮೀಸಲಿದ್ದ ಅನುದಾನವನ್ನು ಬೇರೆ ಯೋಜನೆಗಳಿಗೆ ಉಪಯೋಗಿಸುತ್ತಿರುವುದು ಖಂಡನೀಯ ಎಂದು  ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಸಂದೀಪ ಕಾಂಟೆ ಹೇಳಿದ್ದಾರೆ.

ಇದು ಪರಿಶಿಷ್ಟರಿಗೆ ಮಾಡುತ್ತಿರುವ ಘೋರ ಅನ್ಯಾಯ, ಚುನಾವಣಾ ಪೂರ್ವದಲ್ಲಿ ಸಂವಿಧಾನ, ಸಾಮಾಜಿಕ ನ್ಯಾಯ, ಸಮಾನತೆ ಬಗ್ಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ ನವರ ನೈಜತೆಯ ಮಾತುಗಳು ಇಂದು ನಾಟಕವಾಡಿದಂತೆ ಕಾಣುತ್ತಿವೆ. ಇದು ದಲಿತ ಸಮುದಾಯಕ್ಕೆ ಮಾಡುತ್ತಿರುವ ನಯವಂಚನೆಯಂತೆ ಕಾಣುತ್ತಿದೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ಮಿಸಲಿರಿಸಿದ್ದ ಅನುದಾನವನ್ನು ದಲಿತರ ಏಳಿಗೆಗಾಗಿ ಬಳಸದೆ ಸುಮಾರು 15000 ಕೋಟಿ ರೂಪಾಯಿಗಳನ್ನು ಸರ್ಕಾರ ತಮ್ಮ ಸರ್ಕಾರದ ಅಭೂತ ಪೂರ್ವ ಐತಿಹಾಸಿಕ ಸಾಧನೆಯೆಂದು ಹೇಳಿಕೊಳ್ಳುವ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿದೆ. ಇದು ನಾಚಿಕೆಗೇಡಿನ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ತನ್ನ ಯೋಜನೆಗಳು ನಡೆಸಲು ಆಗದ ಸರ್ಕಾರ, ಪರಿಶಿಷ್ಟರ ಅನುದಾನವನ್ನು ಬಳಸಿ ದಲಿತರನ್ನು ಬಲಿಪಶುಗಳಾಗಿ ಮಾಡುತ್ತಿದ್ದೆ ಹಾಗೂ ಇತ್ತೀಚಿಗಷ್ಟೇ ಶೈಕ್ಷಣಿಕವಾಗಿ ಚೇತರಿಸಿ ಕೊಳ್ಳುತ್ತಿರುವ ದಲಿತ ಸಮುದಾಯವನ್ನು ಶೈಕ್ಷಣಿಕವಾಗಿ ಮುಂದುವರೆಯಲು ವಿದ್ಯಾರ್ಥಿವೇತನ ಅತ್ಯಂತ ಸಹಕಾರಿಯಾಗಿದೆ, ಆದರೆ ಅದನ್ನು ಸಹ ಬಿಡದ ರಾಜ್ಯ ಸರ್ಕಾರ ಹೊಸ ಷರತ್ತುಗಳನ್ನು ವಿಧಿಸುವ ಮುಖಾಂತರ, ಪ್ರೋತ್ಸಾಹ ಧನಕ್ಕೆ ಕತ್ತರಿ ಹಾಕುವ ಕೆಲಸ ಸರ್ಕಾರ ಮಾಡುತ್ತಿರುವ ಶೈಕ್ಷಣಿಕವಾಗಿ ಸರ್ಕಾರ ದಲಿತರನ್ನು ದೂರವಿಡುವ ಹೊನ್ನರಮಾಡುತ್ತಿದೆಯೇ ಎನ್ನುವ ಪ್ರಶ್ನೆ ಮಾಡುತ್ತಿದ್ದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಯಾವುದೇ ಸರ್ಕಾರಗಳು ಬರಲಿ ಎಲ್ಲರನ್ನೂ  ಪರಿಶಿಷ್ಟರನ್ನು ಲೂಟಿ ಮಾಡುವವರೇ ಆಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮತ್ತೊಂದೆಡೆ ಸರ್ಕಾರದಲ್ಲಿ ಪರಿಶಿಷ್ಟರ ಮೇಲೆ ಇಷ್ಟೆಲ್ಲಾ ಅನ್ಯಾಯಗಳು ನಡೀತಾ ಇದ್ದರೂ ಜನಪ್ರತಿನಿಧಿಗಳು,  ಶಾಸಕರುಗಳು ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ, ದಿವಂಗತ ದೇವರಾಜ ಅರಸ್ ಅವರ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದ ಬಸಲಿಂಗಪ್ಪ ಅವರು ಸರ್ಕಾರದಲ್ಲಿ ಸಚಿವರಾಗಿದ್ದರು ಸಹ ಸಮುದಾಯದ ಪ್ರಶ್ನೆ ಬಂದಾಗ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ಸಂಗತಿಗಳು ಇಂದಿಗೂ ನೆನಪಿಗೆ ಬರುತ್ತವೆ.

ಹಾಗಾಗಿ ಮುಖ್ಯಮಂತ್ರಿಗಳು ಪರಿಶಿಷ್ಟರ ಅನುದಾನವನ್ನು ಬಳಸಬಾರದು, ಒಂದುವೇಳೆ ಇಲ್ಲಿಯವರೆಗೆ ಬಳಸಿದ್ದೆ ಅದಲ್ಲಿ ಆ ಅನುದಾನವನ್ನು ವಾಪಸ್ಸು ನೀಡಬೇಕು, ಹಾಗೂ ಪರಿಶಿಷ್ಟ ವಿದ್ಯಾರ್ಥಿಗಳ ಪ್ರೋತ್ಸಾಹ ಧನದ ಹೊಸ ಷರತ್ತನ್ನು ರದ್ದುಗೊಳಿಸಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟವನ್ನು ದಲಿತ ವಿದ್ಯಾರ್ಥಿ ಪರಿಷತ್ ರೂಪಿಸುತ್ತದೆ ಎಂದು ಈ ಮೂಲಕ ತಮ್ಮಲ್ಲಿ ಈ ಪತ್ರಿಕಾ ಪತ್ರಿಕಾ ಪ್ರಕಟಣೆ ಮುಖಾಂತರ ಎಚ್ಚರಿಸುತ್ತೇವೆ ಎಂದು ಅವರು ಹೇಳಿದರು.

 ವರದಿ: ರವಿಕುಮಾರ ಸಿಂಧೆ


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ