ಅಡ್ಡಮತದಾನ ಮಾಡಿದವರ ಹೆಸರಲ್ಲಿ ಕೈಲಾಸ ಸಮಾರಾಧನೆ ಪತ್ರ! - Mahanayaka
4:31 PM Wednesday 20 - August 2025

ಅಡ್ಡಮತದಾನ ಮಾಡಿದವರ ಹೆಸರಲ್ಲಿ ಕೈಲಾಸ ಸಮಾರಾಧನೆ ಪತ್ರ!

kailasa samaradhane
12/06/2022


Provided by

ಬೆಂಗಳೂರು: ರಾಜ್ಯ ಸಭೆಯಲ್ಲಿ ಅಡ್ಡ ಮತದಾನ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನ ಇಬ್ಬರು ಶಾಸಕರ ಫೋಟೋ ಬಳಸಿ ಕೈಲಾಸ ಸಮಾರಾಧನೆ ಪತ್ರ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಘಟನೆ ನಡೆದಿದೆ.

ಕೋಲಾರ ಶಾಸಕ ಕೆ.ಶ್ರೀನಿವಾಸ ಗೌಡ ಹಾಗೂ  ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ದುಡ್ಡಿಗಾಗಿ ಜೆಡಿಎಸ್ ಪಕ್ಷ ಹಾಗೂ ಕಾರ್ಯಕರ್ತರಿಗೆ ಮೋಸ ಮಾಡಿದ್ದಾರೆ. ವೋಟು ಹಾಕಿದ ಮತದಾರರ ಪಾಲಿಗೆ ತೀರಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಕುಮಾರಸ್ವಾಮಿ ಫಾರ್ ಸಿಎಂ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಈ ವಿವಾದಿತ ಚಿತ್ರಗಳನ್ನು ಪೋಸ್ಟ್ ಮಾಡಲಾಗಿದ್ದು, ಈ ಪೋಸ್ಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು, ಬೇಸರ ವಿದ್ದರೆ ಬೇರೆ ರೀತಿಯಲ್ಲಿ ತೋರ್ಪಡಿಸಿ, ಈ ರೀತಿಯ ವರ್ತನೆ ಸರಿಯಲ್ಲ ಎಂದು ಟೀಕಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಭಾರತ-ಬಾಂಗ್ಲಾದೇಶಕ್ಕೆ ಅಂತರ್ದೇಶಿಯ ಬಸ್ ಸೇವೆ ಪುನರಾರಂಭ

ಮದುವೆ ಸಂಭ್ರಮದಲ್ಲಿದ್ದ ಜೋಡಿಯ ನೆಮ್ಮದಿ ಕೆಡಿಸಿದ ಸಂಪ್ರದಾಯವಾದಿಗಳು!

ಮೃಗಾಲಯದ ಮುಂದೆ ಕಾಣಿಸಿಕೊಂಡ ವಿಚಿತ್ರ ಜೀವಿ: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಪ್ರವಾದಿ ವಿರುದ್ಧ ಹೇಳಿಕೆ ಖಂಡಿಸಿ ಪ್ರತಿಭಟನೆ: ಗಾಯಗೊಂಡಿದ್ದ ಇಬ್ಬರು ಸಾವು

ಇತ್ತೀಚಿನ ಸುದ್ದಿ