ಮೊಬೈಲ್ ಬಳಸ ಬೇಡ ಎಂದು ಅಮ್ಮ ಬೈದಿದ್ದಕ್ಕೆ ಸಾವಿಗೆ ಶರಣಾದ ಬಾಲಕ! - Mahanayaka
5:39 PM Saturday 15 - November 2025

ಮೊಬೈಲ್ ಬಳಸ ಬೇಡ ಎಂದು ಅಮ್ಮ ಬೈದಿದ್ದಕ್ಕೆ ಸಾವಿಗೆ ಶರಣಾದ ಬಾಲಕ!

sucide
31/01/2023

ಮೊಬೈಲ್ ಬಳಸಿದ್ದಕ್ಕೆ ಅಮ್ಮ ಬೈದರೆಂದು ನೊಂದುಕೊಂಡ 14 ವರ್ಷದ ಬಾಲಕ ಸಾವಿಗೆ ಶರಣಾದ ಘಟನೆ ಮಂಗಳೂರು ನಗರದ ಪದವು ಬಿ ಗ್ರಾಮದ ಕೋಟಿಮುರ ಎಂಬಲ್ಲಿ ನಡೆದಿದೆ.

ಜ್ಞಾನೇಶ್ (14 ವರ್ಷ) ಮೃತಪಟ್ಟ ಬಾಲಕನಾಗಿದ್ದು, ಈತ ಒಂಭತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ. ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪದವು ಬಿ ಗ್ರಾಮದ ಕೋಟಿಮುರದಲ್ಲಿರುವ ಖಾಸಗಿ ಅಪಾರ್ಟ್ಮೆಂಟ್ ನಲ್ಲಿ ಜಗದೀಶ್ ಹಾಗೂ ವಿನಯ ದಂಪತಿ ಮಗನಾದ ಜ್ಞಾನೇಶ್ ತುಂಟನಾಗಿದ್ದ. ಮೊಬೈಲ್ ಬಳಸುವ ವಿಚಾರವಾಗಿ ಮನೆಯಲ್ಲಿ ಈತನಿಗೆ ತಾಯಿ ಸ್ವಲ್ಪ ಗದರಿಸಿದ್ದರು ಎಂಬ ಕಾರಣಕ್ಕೆ ಬೇಸರದಲ್ಲಿದ್ದ.

ತಾನು ಸ್ನಾನ ಮಾಡಿ ಬರುವುದಾಗಿ ಹೇಳಿ ರೂಮಿನೊಳಗೆ ಹೋದವನು ಅನೇಕ ಸಮಯದವರೆಗೂ ಹೊರಗೆ ಬಾರಲಿಲ್ಲ. ಸಂಶಯಗೊಂಡ ಈತನ ತಂದೆ ಬಾತ್ರೂಮ್ ಬಳಿಯಿರುವ ಕಿಟಕಿಯ ಮೂಲಕ ರೂಮಿನೊಳಗೆ ಹೋಗಿ ನೋಡಿದಾಗ ಬಾಲಕನು ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

 

ಇತ್ತೀಚಿನ ಸುದ್ದಿ