ಕಳೆದ 7 ವರ್ಷಗಳಿಂದ ಮೋದಿ ಸರ್ಕಾರ ‘ಉತ್ತಮ ಆಡಳಿತ’ ನೀಡುತ್ತಿದೆ | ಅಮಿತ್ ಶಾ - Mahanayaka
9:28 AM Thursday 16 - October 2025

ಕಳೆದ 7 ವರ್ಷಗಳಿಂದ ಮೋದಿ ಸರ್ಕಾರ ‘ಉತ್ತಮ ಆಡಳಿತ’ ನೀಡುತ್ತಿದೆ | ಅಮಿತ್ ಶಾ

amith shah
26/12/2021

ನವದೆಹಲಿ:  ಕಳೆದ ಏಳು ವರ್ಷಗಳಿಂದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಜನರಿಗೆ ಉತ್ತಮ ಆಡಳಿತ ನೀಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.


Provided by

ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ(ಡಿ.25)ದ ಪ್ರಯುಕ್ತ ‘ಉತ್ತಮ ಆಡಳಿತ ದಿನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉತ್ತಮ ಆಡಳಿತಕ್ಕಾಗಿ ಜನರು ಹಲವಾರು ವರ್ಷಗಳಿಂದ ಕಾಯುತ್ತಿದ್ದರು. ಕಳೆದ 7 ವರ್ಷಗಳಿಂದ ಪ್ರಧಾನಿ ಮೋದಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ ಎಂದರು.

ಸ್ವಾತಂತ್ರ್ಯ ದೊರೆತು ಹಲವು ವರ್ಷಗಳಾದವು. ಆದರೆ, ನಮಗೆ ಉತ್ತಮ ಆಡಳಿತ ಯಾವಾಗ ದೊರಕುತ್ತದೆ ಎಂದು ಜನರು ಕೇಳುತ್ತಲೇ ಇರುತ್ತಿದ್ದರು. ಉತ್ತಮ ಆಡಳಿತವನ್ನು ಕಾಣದ ಜನರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ನಂಬಿಕೆಯೇ ಹೋಗಿತ್ತು. ಇದೀಗ ಉತ್ತಮ ಆಡಳಿತ ನೀಡುವ ಮೂಲಕ ಪ್ರಜಾಪ್ರಭುತ್ವದ ಮೇಲೆ ಜನರಿಗೆ ವಿಶ್ವಾಸ ಮರಳುವಂತೆ ಮಾಡಿದ್ದಾರೆ ಎಂದರು.

ಕಳೆದ 7 ವರ್ಷಗಳಿಂದಲೂ ಕೇಂದ್ರ ಸರ್ಕಾರದ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪವಿಲ್ಲದಿರುವುದೇ ಉತ್ತಮ ಆಡಳಿತಕ್ಕೆ ನಿದರ್ಶನ ಹಲವಾರು ದಶಕಗಳಿಂದ ಕಲ್ಯಾಣ ಕಾರ್ಯಕ್ರಮಗಳಿಂದ ವಂಚಿತರಾಗಿದ್ದ ಸುಮಾರು 60 ಕೋಟಿ ಜನರಿಗೆ ಅಭಿವೃದ್ಧಿಯ ಲಾಭ ಸಿಗುವಂತೆ ಮಾಡಲಾಯಿತು. ಬಡವರಿಗೆ ಮನೆಗಳು, ಶೌಚಾಲಯಗಳು, ವಿದ್ಯುತ್ ಸಂಪರ್ಕ ಮತ್ತು ಅಡುಗೆ ಅನಿಲ ಸೌಲಭ್ಯ  ನೀಡಲಾಗಿದೆ ಎಂದು ಅವರು ವಿವರಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಾಜಸ್ಥಾನ: ಮಿಗ್​-21 ಫೈಟರ್​ ಜೆಟ್​ ಪತನ; ಪೈಲಟ್​ ವಿಂಗ್​ ಕಮಾಂಡರ್ ಹುತಾತ್ಮ​

ದೇವೇಗೌಡ ಪ್ರಧಾನಿಯಾಗಲು ಕಾಂಗ್ರೆಸ್ ಕಾರಣ: ಡಿ.ಕೆ. ಶಿವಕುಮಾರ್

ಮೂಡುಬಿದಿರೆ: ಎಸ್​ ಕೆಎಫ್​ ಕಾರ್ಖಾನೆಯಿಂದ ತೊಂದರೆ: ಗ್ರಾಮಸ್ಥರಿಂದ ಅಹೋರಾತ್ರಿ ಪ್ರತಿಭಟನೆ

ಉತ್ತರಾಖಂಡ್: ಸಚಿವ ಹರಕ್ ಸಿಂಗ್, ಶಾಸಕರೊಬ್ಬರ ದಿಢೀರ್ ರಾಜೀನಾಮೆ

ಒಂದೇ ಕಾಲೇಜಿನ 33 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢ

ಸ್ನೇಹಿತನಿಂದಲೇ ಯುವಕನ ಕೊಲೆ: ಆರೋಪಿಯ ಬಂಧನ

ಇತ್ತೀಚಿನ ಸುದ್ದಿ