'ಭಾರತ ಮಾತೆಗೆ ಮೋದಿ ದ್ರೋಹ ಬಗೆದಿದ್ದಾರೆ': ಪ್ರಧಾನಿ ವಿರುದ್ಧ ಬಿಜೆಪಿ ನಾಯಕನಿಂದಲೇ ವಾಗ್ದಾಳಿ - Mahanayaka
3:14 PM Wednesday 28 - January 2026

‘ಭಾರತ ಮಾತೆಗೆ ಮೋದಿ ದ್ರೋಹ ಬಗೆದಿದ್ದಾರೆ’: ಪ್ರಧಾನಿ ವಿರುದ್ಧ ಬಿಜೆಪಿ ನಾಯಕನಿಂದಲೇ ವಾಗ್ದಾಳಿ

11/09/2024

ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಚೀನಾವು ಭಾರತವನ್ನು ಆಕ್ರಮಿಸಿಕೊಂಡಿರುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಚೀನಾ ಆಕ್ರಮಣದ ವಿಷಯದಲ್ಲಿ ಪ್ರಧಾನಿ ಮೌನವನ್ನು “ಭಾರತ ಮಾತೆಗೆ ಮೋದಿ ದ್ರೋಹ ಬಗೆದಿದ್ದಾರೆಂದು ಘೋಷಿಸೋಣವೇ” ಎಂದು ಪ್ರಶ್ನಿಸಿದ್ದಾರೆ.

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಅರುಣಾಚಲ ಪ್ರದೇಶದಲ್ಲಿ ಕನಿಷ್ಠ 60 ಕಿಲೋಮೀಟರ್ ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ವರದಿಯನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ ಚೀನಾದೊಂದಿಗೆ ರಾಯಭಾರಿ ಮಟ್ಟದ ಸಂಬಂಧವನ್ನು ಕಡಿದುಕೊಳ್ಳಲು ಆಗ್ರಹಿಸಿದ್ದಾರೆ.

ಮಾಲ್ಡೀವ್ಸ್ ಸಿಂಡ್ರೋಮ್ ಬಾಂಗ್ಲಾದೇಶದಲ್ಲಿ ಮೌನವಾಗಿ ಹರಡುತ್ತಿದೆ ಮತ್ತು ಮೋದಿ ಅವರ ಪರಂಪರೆಯು ಭಾರತದ ವಿಘಟನೆಗಾಗಿ ಕೆಲಸ ಮಾಡುವ ನೆರೆಹೊರೆಯವರನ್ನು ಸೃಷ್ಟಿಸುತ್ತಿದೆ. ಮುಂಬರುವ 25 ವರ್ಷಗಳ ‘ಅದ್ಭುತ’ ಮೋದಿ ಪರಂಪರೆ: ಭಾರತವನ್ನು ಸುತ್ತುವರೆದಿರುವ ನೆರೆಹೊರೆಯವರು ನಮ್ಮ ವಿಘಟನೆಗಾಗಿ ಕೆಲಸ ಮಾಡುತ್ತಾರೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಬಿಜೆಪಿಯ ಹಿರಿಯ ನಾಯಕ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವಾರು ಬಾರಿ ಸರ್ಕಾರದ ಕೆಲವು ನಿಲುವುಗಳನ್ನು ವಿರೋಧಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ