ಮೋದಿ ಮಣಿಪುರದ ಬಗ್ಗೆ ಏನೂ ಮಾತನಾಡ್ತಿಲ್ಲ: ಮಾಜಿ ಕೇಂದ್ರ ಸಚಿವ ಜೈರಾಂ ರಮೇಶ್ ವಾಗ್ದಾಳಿ - Mahanayaka

ಮೋದಿ ಮಣಿಪುರದ ಬಗ್ಗೆ ಏನೂ ಮಾತನಾಡ್ತಿಲ್ಲ: ಮಾಜಿ ಕೇಂದ್ರ ಸಚಿವ ಜೈರಾಂ ರಮೇಶ್ ವಾಗ್ದಾಳಿ

jai ram ramesh
15/08/2023


Provided by

ಚಿಕ್ಕಮಗಳೂರು: ಮೋದಿ ಮಣಿಪುರದ ಬಗ್ಗೆ ಏನೂ ಮಾತನಾಡ್ತಿಲ್ಲ, ಮೌನ ವೃತ ತೆಗೆದುಕೊಂಡಿದ್ದಾರೆ, 2 ಗಂಟೆ 13 ನಿಮಿಷಲ್ಲಿ 4 ಮಿನಿಟ್ ಮಣಿಪುರದ ಬಗ್ಗೆ ಮಾತನಾಡಿದ್ದಾರೆ. ಏನು ಹೇಳಿದ್ದಾರೆ, ಮಣಿಪುರ್ ಮೇ ಶಾಂತಿ ಆಯೇಗಿ, ಅದು ಎಲ್ಲರಿಗೂ ಗೊತ್ತು ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಕೇಂದ್ರ ಸಚಿವ ಜೈರಾಂ ರಮೇಶ್ ವಾಗ್ದಾಳಿ ನಡೆಸಿದ್ರು.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಇತಿಹಾಸ ತಿರುಚೋದು, ಕಾಂಗ್ರೆಸ್, ಇಂದಿರಾ, ನೆಹರೂ, ರಾಜೀವ್ ರನ್ನ ಬೈಯೋದು ಅಷ್ಟೆ, ನರೇಂದ್ರ ಮೋದಿ ಇಷ್ಟನ್ನ ಬಿಟ್ಟು ಬೇರೇನೂ ಮಾಡ್ತಿಲ್ಲ ಎಂದು ಅವರು ಕಿಡಿಕಾರಿದ್ರು.
ಇಂಫಾಲ್ ವ್ಯಾಲಿನಲ್ಲಿ 22ರ ಚುನಾವಣೆಯಲ್ಲಿ 40ರಲ್ಲಿ 28 ಬಿಜೆಪಿಗೆ 10 ಕೂಕಿ ಸೀಟ್ ನಲ್ಲಿ 10 ಬಿಜೆಪಿಗೆ ಬಂದಿದೆ, ಎಂಥಾ ಮ್ಯಾಂಡೇಟ್, 15 ಮಾಸದ ಕೆಳಗೆ ಮಣಿಪುರದಲ್ಲಿ ಇಂತಹಾ ಘಟನೆ ನೋಡುತ್ತಿದ್ದೇವೆ, ಕಾರಣ ಒಂದೇ ಒಂದು… ಮಣಿಪುರದಲ್ಲಿ ಡಬಲ್ ಇಂಜಿನ್ ಸರ್ಕಾರ ಫೇಲಾಗಿದೆ. ಸಿಎಂ ಫೇಲ್ ಆಗಿ ಪ್ರವೋಕ್ ಮಾಡಿದ್ದಾರೆ, ಹೋಂ ಮಿನಿಸ್ಟರ್ ಕ್ಲೀನ್ ಚಿಟ್ ಕೊಡ್ತಾರೆ, ಪಿಎಂ ಚೈನಾಗೆ ಕ್ಲೀನ್ ಚೀಟ್ ಕೊಡ್ತಾರೆ, ಹೋಂ ಮಿನಿಸ್ಟರ್ ಮಣಿಪುರ ಸಿಎಂಗೆ ಕ್ಲೀನ್ ಚಿಟ್ ಕೊಡ್ತಾರೆ ಎಂದರು.

ಡೀಮಾನಿಟೈಸ್, ಜಿ.ಎಸ್.ಟಿ, ನಿರುದ್ಯೋಗ, ಯಾವುದರ ಬಗ್ಗೆಯೂ ಹೇಳಿಲ್ಲ, ಬರೀ ಕಾಂಗ್ರೆಸ್ ಪಾರ್ಟಿಯನ್ನ ಟಾರ್ಗೆಟ್ ಮಾಡಿ ಮಾತನಾಡ್ತಿದ್ದಾರೆ ಎಂದು ಪ್ರಧಾನಿ ಮೋದಿ ಅವರ ಸ್ವಾತಂತ್ರ್ಯೋತ್ಸವ ಭಾಷಣದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ