ಮೋದಿ ದೇವದೂತರಂತೆ ಕಾಣುತ್ತಾರೆ, ಆದರೆ ಅವರು ಕಿಲ್ಲರ್: ಡೊನಾಲ್ಡ್ ಟ್ರಂಪ್ ಹೇಳಿದ್ದೇನು? - Mahanayaka

ಮೋದಿ ದೇವದೂತರಂತೆ ಕಾಣುತ್ತಾರೆ, ಆದರೆ ಅವರು ಕಿಲ್ಲರ್: ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

trump modi G7
18/06/2026

“ನರೇಂದ್ರ ಮೋದಿ ಅವರು ಅತ್ಯಂತ ಕಠಿಣ ಸಂಧಾನಕಾರ (negotiator). ಅವರು ನೋಡಲು ದೇವದೂತರಂತೆ (Angel) ತುಂಬಾ ಶಾಂತವಾಗಿ ಕಾಣುತ್ತಾರೆ. ಆದರೆ ವಾಸ್ತವದಲ್ಲಿ ಅವರು ಅಷ್ಟೇ ಕಠಿಣ ಹಾಗೂ ಕಿಲ್ಲರ್. ಅವರ ಈ ಶಾಂತ ರೂಪವು ಎದುರಾಳಿಗಳನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ. ಅವರು ವ್ಯಾಪಾರ ಮತ್ತು ಮಾತುಕತೆಗಳಲ್ಲಿ ಅತ್ಯಂತ ಚಾಣಾಕ್ಷರು,” ಎಂದು ಮಾರ್ಮಿಕವಾಗಿ ಹೊಗಳಿದ್ದಾರೆ.

ಫ್ರಾನ್ಸ್‌ ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಅಮೆರಿಕ ನಡುವೆ ಯಾವುದೇ ಅಧಿಕೃತ ರಕ್ಷಣಾ ಒಪ್ಪಂದವಿಲ್ಲದಿದ್ದರೂ, ಭಾರತದ ರಕ್ಷಣೆಗೆ ತಾವು ಬದ್ಧವಾಗಿರುವುದಾಗಿ ಟ್ರಂಪ್ ಘೋಷಿಸಿದ್ದಾರೆ. “ನಮ್ಮ ನಡುವೆ ಔಪಚಾರಿಕ ರಕ್ಷಣಾ ಒಪ್ಪಂದವಿಲ್ಲದೇ ಇರಬಹುದು. ಆದರೆ ಭಾರತದ ಮೇಲೆ ಯಾವುದೇ ದಾಳಿಯಾದರೂ ನಾವು ಸಹಾಯಕ್ಕೆ ಧಾವಿಸಲಿದ್ದೇವೆ. ಮೋದಿಯವರು ನಾಯಕರಾಗಿರುವ ತನಕ ಭಾರತದ ಬೆಂಬಲಕ್ಕೆ ಅಮೆರಿಕ ಸದಾ ಇರಲಿದೆ,” ಎಂದರು.

ಇತ್ತೀಚೆಗೆ ಓಮನ್ ಕೊಲ್ಲಿಯಲ್ಲಿ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಈ ವಿಷಯವನ್ನು ಮಾತುಕತೆಯ ವೇಳೆ ಪ್ರಸ್ತಾಪಿಸಿದರು. ಮಧ್ಯಪ್ರಾಚ್ಯದಲ್ಲಿ ಲಕ್ಷಾಂತರ ಭಾರತೀಯ ನಾವಿಕರು ಕೆಲಸ ಮಾಡುತ್ತಿದ್ದು, ಅವರ ಸುರಕ್ಷತೆ ಭಾರತದ ಪ್ರಮುಖ ಆದ್ಯತೆಯಾಗಿದೆ ಎಂದು ಮೋದಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ಘಟನೆಗೆ ಸಂತಾಪ ಸೂಚಿಸಿದ್ದು, ನಾವಿಕರ ವೃತ್ತಿ ಕಠಿಣವಾಗಿದ್ದು ಅವರ ಸುರಕ್ಷತೆಗಾಗಿ ಉಭಯ ದೇಶಗಳು ಜೊತೆಯಾಗಿ ಕೆಲಸ ಮಾಡುತ್ತಿವೆ ಎಂದು ಭರವಸೆ ನೀಡಿದ್ದಾರೆ. ಭಿನ್ನಾಭಿಪ್ರಾಯಗಳ ವದಂತಿಯನ್ನು ತಳ್ಳಿಹಾಕಿದ ಟ್ರಂಪ್, ತಮ್ಮಿಬ್ಬರ ಮತ್ತು ಉಭಯ ದೇಶಗಳ ನಡುವಿನ ಸಂಬಂಧ ಎಂದಿಗಿಂತಲೂ ಹೆಚ್ಚು ಗಟ್ಟಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ