ಏರ್ ಪೋರ್ಟ್ ಮಾರಲು ಅದಾನಿ ಎಷ್ಟು ಟೆಂಪೋ ಹಣ ಕೊಟ್ಟಿದ್ದಾರೆ..? ಪ್ರಧಾನಿ ಮೋದಿಯವರತ್ರ ಪ್ರಶ್ನಿಸಿದ ರಾಹುಲ್ ಗಾಂಧಿ

ಪ್ರಧಾನಿ ಮೋದಿ ಪಾಲಿಗೆ ರಾಹುಲ್ ಗಾಂಧಿ ಕಬ್ಬಿಣದ ಕಡಲೆಯಾಗುತ್ತಿದ್ದಾರೆ. ದೇಶದ ಏರ್ ಪೋರ್ಟ್ ಗಳನ್ನು ಅದಾನಿಗೆ ಕೊಡಲು ನರೇಂದ್ರ ಮೋದಿಯವರಿಗೆ ಎಷ್ಟು ಟೆಂಪೋ ಹಣ ಲಭಿಸಿದೆ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ. ಅಂಬಾನಿ ಮತ್ತು ಅದಾನಿಗಳು ಕಾಂಗ್ರೆಸ್ಸಿಗೆ ಅರ್ಧ ರಾತ್ರಿ ಟೆಂಪೋಗಳಲ್ಲಿ ಕಪ್ಪು ಹಣವನ್ನು ನೀಡಿದ್ದಾರೆ ಎಂದು ದಿನಗಳ ಹಿಂದೆ ಆರೋಪಿಸಿದ್ದ ಮೋದಿಗೆ ರಾಹುಲ್ ಗಾಂಧಿ ಹೀಗೆ ತಿರುಗೇಟು ನೀಡಿದ್ದಾರೆ.
ಇಡಿ ಮತ್ತು ಸಿಬಿಐ ಮೂಲಕ ತಕ್ಷಣ ಮೋದಿ ಅವರು ಈ ಕುರಿತಂತೆ ತನಿಖೆ ನಡೆಸಬೇಕು. ಯಾಕೆ ಒಂದು ಬಾರಿ ಹೇಳಿ ಆ ಬಳಿಕ ಮೋದಿ ಈ ವಿಷಯದಲ್ಲಿ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ರಾಹುಲ್ ಪ್ರಶ್ನೆ ಮಾಡಿದ್ದಾರೆ.
ಇವತ್ತು ನಾನು ಲಕ್ನೋ ವಿಮಾನ ನಿಲ್ದಾಣದಲ್ಲಿದ್ದೆ. ಇಲ್ಲಿಂದ ಮುಂಬೈ ವಿಮಾನ ನಿಲ್ದಾಣದವರೆಗೆ ಮತ್ತು ಗುವಾಹಟಿ ವಿಮಾನ ನಿಲ್ದಾಣದಿಂದ ಅಹಮದಾಬಾದ್ ವಿಮಾನ ನಿಲ್ದಾಣದವರೆಗೆ ಎಲ್ಲಾ ವಿಮಾನ ನಿಲ್ದಾಣಗಳನ್ನು ಪ್ರಧಾನಿ ಮೋದಿ ಅವರು ತನ್ನ ಟೆಂಪೋ ಗೆಳೆಯನಿಗೆ ನೀಡಿದ್ದಾರೆ. ಎಷ್ಟು ಟೆಂಪೋ ಹಣಕ್ಕೆ ಅವರು ಈ ದೇಶದ ಆಸ್ತಿಗಳನ್ನು ಅದಾನಿಗೆ ಮಾರಿದ್ದಾರೆ? ಈ ಕುರಿತಾದ ಸತ್ಯವನ್ನು ನರೇಂದ್ರ ಮೋದಿ ಈ ದೇಶದ ಮುಂದೆ ಬಿಚ್ಚಿಡುವರೆ ಎಂದು ರಾಹುಲ್ ಗಾಂಧಿ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth