ಮೊಯ್ದಿನ್ ಬಾವಾ ವಿರುದ್ಧ 3 ಕೋಟಿ ರೂ. ಮಾನನಷ್ಟ ಹಾಕ್ತೇನೆ: ಶಾಸಕ ವೈ. ಭರತ್ ಶೆಟ್ಟಿ - Mahanayaka
9:56 AM Tuesday 16 - September 2025

ಮೊಯ್ದಿನ್ ಬಾವಾ ವಿರುದ್ಧ 3 ಕೋಟಿ ರೂ. ಮಾನನಷ್ಟ ಹಾಕ್ತೇನೆ: ಶಾಸಕ ವೈ. ಭರತ್ ಶೆಟ್ಟಿ

bharath shetty
24/12/2022

ಮಂಗಳೂರಿನ ಸುರತ್ಕಲ್ ಮಾರುಕಟ್ಟೆ ವಿಚಾರಕ್ಕೆ ಸಂಬಂಧಿಸಿ ಮಂಗಳೂರು ಉತ್ತರ ಶಾಸಕ ಮೊಯ್ದಿನ್ ಬಾವಾ ಅವರು ನನ್ನ ವಿರುದ್ಧ 38 ಕೋಟಿ ರೂ. ಕಮಿಷನ್ ಪಡೆದುಕೊಂಡಿರುವ ಆರೋಪ ಮಾಡಿದ್ದಾರೆ. ಈ ಬಗ್ಗೆ ಅಧಿಕೃತ ದಾಖಲೆಗಳು ಇದ್ದಲ್ಲಿ ಬಹಿರಂಗಪಡಿಸಲಿ, ಇಲ್ಲವಾದರೆ ಸುಳ್ಳು ಸುದ್ದಿ ಪ್ರಚಾರ ಮಾಡುತ್ತಿರುವ ಮೊಯ್ದಿನ್ ಬಾವಾ ವಿರುದ್ಧ 3 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಮಂಗಳೂರು ಉತ್ತರ ಕ್ಷೇತ್ರ ಶಾಸಕ ವೈ. ಭರತ್ ಶೆಟ್ಟಿ ಹೇಳಿದ್ದಾರೆ.


Provided by

ಸುರತ್ಕಲ್ ಬಳಿ ಮಾಧ್ಯಮ ಮಿತ್ರರ ಜೊತೆ ಮಾತಾಡಿದ ಶಾಸಕರು, “ಮಂಗಳೂರು ಉತ್ತರ ಕ್ಷೇತ್ರ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಈಗಾಗಲೇ ಕ್ಷೇತ್ರದ ವಿವಿಧೆಡೆಗಳಲ್ಲಿ ರಸ್ತೆ, ತಡೆಗೋಡೆ, ಪಾರ್ಕ್ ಇನ್ನಿತರ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸುರತ್ಕಲ್ ಮಾರುಕಟ್ಟೆ ಅರ್ಧಕ್ಕೇ ನಿಲ್ಲಲು ಮಾಜಿ ಶಾಸಕ ಮೊಯಿದೀನ್ ಬಾವಾ ಕಾರಣ. ಸ್ಥಳವನ್ನು ಗುತ್ತಿಗೆ ವಹಿಸಿಕೊಂಡವರಿಗೆ ಸಂಪೂರ್ಣ ಬಿಟ್ಟುಕೊಡದ ಕಾರಣ ಅವರಿಗೆ ಅರ್ಧದಲ್ಲೇ ಪೇಮೆಂಟ್ ಮಾಡಲಾಗಿದೆ. ಈಗ ಹೆಚ್ಚುವರಿ ಅನುದಾನ ಸರಕಾರ ನೀಡಿದ್ದು ಕಾಮಗಾರಿ ಮತ್ತೆ ಪ್ರಾರಂಭಗೊಳ್ಳಲಿದೆ. ನಿರಾಧಾರ ಆರೋಪ ಮಾಡುವ ಬಾವಾರಿಗೆ ಲಾಯರ್ ನೋಟಿಸ್ ಕೊಡಲಾಗುವುದು ಮಾತ್ರವಲ್ಲದೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು” ಎಂದರು.

ಮಂಗಳೂರು ಮೇಯರ್ ಜಯಾನಂದ ಅಂಚನ್, ಕಾರ್ಪೋರೇಟರ್ ಶ್ವೇತಾ ಪೂಜಾರಿ, ನಯನ ಕೋಟ್ಯಾನ್, ಮಂಗಳೂರು ಉತ್ತರ ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ